ಪೆರು ಅಧ್ಯಕ್ಷರಾಗಿ ಆಯ್ಕೆಯಾದ ಗ್ರಾಮೀಣ ಭಾಗದ ಶಿಕ್ಷಕ!

masthmagaa.com:

ದಕ್ಷಿಣ ಅಮೆರಿಕ ದೇಶವಾದ ಪೆರುವಿನಲ್ಲಿ ಹೊಸ ಅಧ್ಯಕ್ಷರ ಆಯ್ಕೆಯಾಗಿದೆ. 40 ವರ್ಷಗಳಲ್ಲೇ ಅತಿ ದೀರ್ಘವಾದ ಅಂದ್ರೆ ಒಂದು ತಿಂಗಳ ಮತ ಎಣಿಕೆ ನಡೆದಿದ್ದು, ಪೆಡ್ರೋ ಕ್ಯಾಸ್ಟಿಲೋ ಅನ್ನೋರು ಗೆದ್ದಿದ್ದಾರೆ. ಕ್ಯಾಸ್ಟಿಲೋ ಬಲಪಂಥೀಯ ನಾಯಕ ಕಿಕೋ ಫುಜಿಮೋರಿಯವ್ರನ್ನ 44 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಪೆಡ್ರೋ ಕ್ಯಾಸ್ಟಿಲೋ ಗ್ರಾಮೀಣ ಭಾಗದಲ್ಲಿ ಶಿಕ್ಷಕರಾಗಿದ್ದವರು. ರೈತರೂ ಹೌದು.. ನಂತರ ರಾಜಕೀಯಕ್ಕೆ ಬಂದಿದ್ರು. ದೇಶದ ಬಡ ಮತ್ತು ಗ್ರಾಮೀಣ ಭಾಗದ ಜನರಿಂದ ಪೆಡ್ರೋ ಕ್ಯಾಸ್ಟಿಲೋಗೆ ಒಳ್ಳೆ ಸಪೋರ್ಟ್​ ಇದೆ. ಅಂದಹಾಗೆ ಪೆರು ಅತಿ ಹೆಚ್ಚು ತಾಮ್ರ ಉತ್ಪಾದಿಸೋ ದೇಶವಾಗಿದ್ದು, ಕೊರೋನಾದಿಂದಾಗಿ ಆರ್ಥಿಕತೆ ಕೆಟ್ಟು ಕೆರ ಹಿಡಿದುಹೋಗಿದೆ. ದೇಶದ 3ನೇ 1ರಷ್ಟು ಜನ ಬಡತನದಿಂದ ಬಳಲುತ್ತಿದ್ದಾರೆ.

-masthmagaa.com

Contact Us for Advertisement

Leave a Reply