ಲಾಕ್‌ ಡೌನ್‌ ಮತ್ತೆ ಕಂಟಿನ್ಯೂ!

masthmagaa.com:

ಸಿಎಂ ಬಿಎಸ್ ಯಡಿಯೂರಪ್ಪ ಲಾಕ್ಡೌನ್ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಅವರ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

ಜೂನ್ 14ರ ವರೆಗೂ ಲಾಕ್ಡೌನ್ ಕಂಟಿನ್ಯೂ
7 ದಿನ ಲಾಕ್ ಡೌನ್ ವಿಸ್ತರಿಸಿ ಸಿಎಂ ಘೋಷಣೆ.
ವಾರದ ನಂತರ ಪಾಸಿಟಿವಿಟಿ ರೇಟ್ 5-3 ಪರ್ಸೆಂಟ್ ಗೆ ಇಳಿದರೆ ಲಾಕ್ ಡೌನ್ ಓಪನ್.
ಸದ್ಯ ಪಾಸಿಟಿವಿಟಿ ರೇಟ್ ಸುಮಾರು 15 ಪರ್ಸೆಂಟ್ ಇದೆ.
ಕೇಂದ್ರ ಸರ್ಕಾರದೊಂದಿಗೆ ಚರ್ಚೆ ಮಾಡ್ತೀವಿ. ಹಂತಹಂತವಾಗಿ ಓಪನ್ ಮಾಡಲಾಗುತ್ತೆ.
ಆದರೆ ಜನ ಸಹಕರಿಸಬೇಕು.

ರಾಜ್ಯ ಸರ್ಕಾರದಿಂದ 5೦೦ ಕೋಟಿ ಪ್ಯಾಕೇಜ್ ಘೋಷಣೆ
ಇದು ಎರಡನೇ ಪ್ಯಾಕೇಜ್.
ಮಗ್ಗಗಳ ಕಾರ್ಮಿಕರಿಗೆ 3 ಸಾವಿರ.
ಚಲನಚಿತ್ರ ಹಾಗೂ ಟಿವಿ ಕಲಾವಿದರಿಗೆ 3 ಸಾವಿರ.
ಸಿನೆಮಾ, ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ 3 ಸಾವಿರ.
ಮೀನುಗಾರರಿಗೆ 3 ಸಾವಿರ.
ಅರ್ಚಕರು, ಅಡುಗೆ ಕೆಲಸದವರಗೆ 3 ಸಾವಿರ.
ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿಗೆ 2 ಸಾವಿರ.
ಆಶಾ ಕಾರ್ಯಕರ್ತರಿಗೆ 3 ಸಾವಿರ.
ಶಾಲಾ ಮಕ್ಕಳಿಗೆ ಹಾಲಿನಪುಡಿ.
ಸಣ್ಣ ಕೈಗಾರಿಕೆ ವಿದ್ಯುತ್ ಬಿಲ್ ವಿನಾಯಿತಿ.
ಅನುದಾನಿತ ಖಾಸಗಿ ಶಾಲಾ ಶಿಕ್ಷಕರಿಗೆ 5 ಸಾವಿರ.
ಇದು ಭಾಗ-2 ಪ್ಯಾಕೇಜ್. ಮೊದಲ ಆರ್ಥಿಕ ಪ್ಯಾಕೇಜ್ ನಲ್ಲಿ ಉಳಿದ ವಲಯಗಳಿಗೆ ಸಹಾಯ ಘೋಷಿಸಲಾಗಿತ್ತು.
ಎರಡೂ ಪ್ಯಾಕೇಜ್ ಗಳನ್ನು ತುರ್ತಾಗಿ ಫಲಾನುಭವಿಗಳ ಮನೆ ಬಾಗಿಲಿಗೇ ತಲುಪಿಸಲು ಕ್ರಮ
– ಸಿಎಂ ಯಡಿಯೂರಪ್ಪ ಘೋಷಣೆ

-masthmagaa.com

Contact Us for Advertisement

Leave a Reply