ಜಿಯೋದಲ್ಲಿ 43 ಸಾವಿರ ಕೋಟಿ ಹೂಡಿಕೆ ಮಾಡಿದ ಫೇಸ್​ಬುಕ್​​..!

masthmagaa.com:

ಮುಖೇಶ್ ಅಂಬಾನಿ ಮಾಲೀಕತ್ವದ ಜಿಯೋದಲ್ಲಿ ಫೇಸ್​​ಬುಕ್ 10% ಶೇರು ಖರೀದಿಸಿದೆ. ಈ ಮೂಲಕ ಬರೋಬ್ಬರಿ 5.7 ಬಿಲಿಯನ್ ಡಾಲರ್ ಅಂದ್ರೆ 43,574 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಈ ಬಗ್ಗೆ ಅಧಿಕೃತವಾಗಿ ಘೋಷಿಸಿರುವ ಫೇಸ್​ಬುಕ್​, ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಾಯನ್ಸ್ ಜಿಯೋದಲ್ಲಿ ಶೇ.9.99ರಷ್ಟು ಶೇರು ಖರೀದಿಸಿದ್ದೇವೆ. ಇದಕ್ಕಾಗಿ ಫೇಸ್​ಬುಕ್​​ 5.7 ಬಿಲಿಯನ್ ಡಾಲರ್ ಹೂಡಿಕೆ ಮಾಡ್ತಿದೆ. ಜಿಯೋ ಭಾರತದಲ್ಲಿ ಅತಿದೊಡ್ಡ ಬದಲಾವಣೆ ತಂದಿದ್ದು, ನಮ್ಮನ್ನು ಆಕರ್ಷಿಸಿದೆ. ತುಂಬಾ ಕಡಿಮೆ ಸಮಯದಲ್ಲಿ ಜಿಯೋ 38 ಕೋಟಿಗೂ ಅಧಿಕ ಜನರನ್ನು ಆನ್​ಲೈನ್​ ಪ್ಲಾಟ್​​​ಫಾರ್ಮ್​​ನಲ್ಲಿ ಜೋಡಿಸಿದೆ. ಹೀಗಾಗಿ ನಾವು ಜಿಯೋ ಮೂಲಕ ಭಾರತದ ಮತ್ತಷ್ಟು ಜನರ ಜೊತೆ ಬೆರೆಯಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದೆ.

-masthmagaa.com

Contact Us for Advertisement

Leave a Reply