masthmagaa.com:

ನಾಳೆ 2020ರ 4ನೇ ಮತ್ತು ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಇದು ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಗೋಚರವಾಗುತ್ತದೆ. ಭಾರತದಲ್ಲಿ ಮಧ್ಯಾಹ್ನ 1 ಗಂಟೆ 2 ನಿಮಿಷಕ್ಕೆ ಗ್ರಹಣ ಶುರುವಾಗುತ್ತದೆ ಅಂತ ಅಂದಾಜಿಸಲಾಗಿದೆ. ಜೊತೆಗೆ ಮಧ್ಯಾಹ್ನ 3 ಗಂಟೆ 12 ನಿಮಿಷಕ್ಕೆ ಗರಿಷ್ಠ ಮಟ್ಟದಲ್ಲಿರುತ್ತದೆ. ಸಂಜೆ 5 ಗಂಟೆ 23 ನಿಮಿಷಕ್ಕೆ ಚಂದ್ರಗ್ರಹಣ ಅಂತ್ಯಗೊಳ್ಳಲಿದೆ. ಗ್ರಹಣದ ಒಂದು ಭಾಗ ಮಾತ್ರ ಭಾರತದಲ್ಲಿ ಗೋಚರವಾಗುತ್ತದೆ. ಅದು ಕೂಡ ಉತ್ತರ ಭಾರತ ಮತ್ತು ಈಶಾನ್ಯ ಭಾರತದ ಕೆಲವೆಡೆ. ಎಲ್ಲಕ್ಕಿಂತ ಮೊದಲು ಗ್ರಹಣ ಅಂದ್ರೆ ಏನಂತ ತಿಳಿದುಕೊಳ್ಳಬೇಕು.. ಇದು ಪೆನಂಬ್ರಲ್ ಚಂದ್ರಗ್ರಹಣವಾಗಿದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಹಾದು ಹೋಗುತ್ತದೆ. ಈ ವೇಳೆ ಭೂಮಿಯ ನೆರಳು ಚಂದ್ರನ ಮೇಲೆ ಬೀಳೋದ್ರಿಂದ ಗ್ರಹಣ ಸಂಭವಿಸುತ್ತೆ. ಮುಂದಿನ ಚಂದ್ರಗ್ರಹಣ 2021ರ ಮೇ 26ರಂದು ಸಂಭವಿಸಲಿದೆ.

-masthmagaa.com

Contact Us for Advertisement

Leave a Reply