ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಝು ಮೇಲೆ ಭ್ರಷ್ಟಾಚಾರ ಆರೋಪ!

masthmagaa.com:

ಅಧಿಕಾರಕ್ಕೆ ಏರ್ತಲೇ ಮಿತ್ರ ಭಾರತದ ಜೊತೆಗೆ ಕಿರಿಕ್‌ ಮಾಡ್ಕೊಂಡು ಚೀನಾ ಕೈಗೊಂಬೆಯಾಗಿರೋ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಝುಗೆ ದೊಡ್ಡ ಸಂಕಷ್ಟ ಎದುರಾಗಿದೆ. ಮುಯಿಝು ಮೇಲೆ ಭಾರೀ ಭ್ರಷ್ಟಾಚಾರದ ಆರೋಪ ಮಾಡಲಾಗಿದೆ. ಪರಿಣಾಮ ಅಲ್ಲಿನ ವಿಪಕ್ಷಗಳ ಅಧಿಕಾರದಿಂದ ಕೆಳಗಿಳಿಬೇಕು ಅಂತ ಒತ್ತಾಯಿಸ್ತಿದ್ದಾರೆ. ಏಪ್ರಿಲ್‌ 21ರಂದು ಮಾಲ್ಡೀವ್ಸ್‌ನಲ್ಲಿ ಪಾರ್ಲಿಮೆಂಟ್‌ ಎಲೆಕ್ಷನ್‌ ಇರೋ ಹೊತ್ತಲ್ಲೇ ಇದೀಗ ಅಪರಿಚಿತ ವ್ಯಕ್ತಿಯೊಬ್ಬ ಸೋಶಿಯಲ್‌ ಮೀಡಿಯಾದಲ್ಲಿ ಗುಪ್ತಚರ ವರದಿಗಳನ್ನ ಲೀಕ್‌ ಮಾಡಿದ್ದಾನೆ. ಮಾಲ್ಡೀವ್ಸ್‌ನ ಹಣಕಾಸು ಪ್ರಾಧಿಕಾರದ ಫಿನಾನ್ಷಿಯಲ್‌ ಇಂಟಲಿಜೆನ್ಸ್‌ ಯೂನಿಟ್‌ ಮತ್ತು ಮಾಲ್ಡೀವ್ಸ್‌ ಪೋಲಿಸ್‌ ಸರ್ವೀಸ್‌ಗೆ ಸೇರಿದ ಈ ಡಾಕ್ಯುಮೆಂಟ್‌ಗಳಲ್ಲಿ ಮಾಲ್ಡೀವ್ಸ್‌ ಪ್ರಧಾನಿ ಮೊಹಮ್ಮದ್‌ ಮುಯಿಝು ಭ್ರಷ್ಟಚಾರದಲ್ಲಿ ಇನ್ವಾಲ್ವ್‌ ಆಗಿದ್ರು ಅಂತ ಹೇಳಲಾಗಿದೆ. ಅಕ್ರಮವಾಗಿ ತಮ್ಮ ಪರ್ಸನಲ್‌ ಬ್ಯಾಂಕ್‌ ಅಕೌಂಟ್‌ಗೆ ಹಣ ಟ್ರಾನ್ಸ್‌ಫರ್‌ ಮಾಡಿದ್ದಾರೆ. ಸಾಕಷ್ಟು ಅಕ್ರಮ ವಹಿವಾಟು ನಡೆಸಿದ್ದಾರೆ ಹಾಗೂ ತಮ್ಮ ನಿಧಿ ಮೂಲವನ್ನ ಮರೆಮಾಚೋಕೆ ಕಾರ್ಪೋರೇಟ್‌ ಸಂಸ್ಥೆಗಳ ಸಹಾಯ ಪಡೆದಿದ್ದಾರೆ ಅಂತ ರಿಪೋರ್ಟ್‌ನಲ್ಲಿ ಬಹಿರಂಗಪಡಿಸಲಾಗಿದೆ. ಈ ರಿಪೋರ್ಟ್‌ ಹೊರ ಬೀಳ್ತಿದ್ಹಾಗೆ…. ಮಾಲ್ಡೀವ್ಸ್‌ ರಾಜಕೀಯದಲ್ಲಿ ಬಾರೀ ಸಂಚಲನ ಮೂಡಿದೆ. ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಮಾಲ್ಡೀವ್ಸ್‌ನ ವಿಪಕ್ಷಗಳಾದ ಮಾಲ್ಡೀವಿಯನ್‌ ಡೆಮಾಕ್ರೆಟಿಕ್‌ ಪಾರ್ಟಿ ಮತ್ತು ಪೀಪಲ್ಸ್‌ ನ್ಯಾಷನಲ್‌ ಫ್ರಂಟ್‌ ಮುಯಿಝುರ ತನಿಖೆ ನಡೆಸ್ಬೇಕು ಅಂತ ಡಿಮಾಂಡ್‌ ಇಟ್ಟಿವೆ. ಇನ್ನು ಮಾಲ್ಡೀವ್ಸ್‌ನ ಮಾಜಿ ಉಪಾಧ್ಯಕ್ಷರಾದ ಡಾ ಮೊಹಮದ್‌ ಜಮೀಲ್‌ ಅಹ್ಮದ್‌ ಒಂದ್‌ ಸ್ಟೆಪ್‌ ಮುಂದೆ ಹೋಗಿ, ಮುಯಿಝು ಅವ್ರನ್ನ ಅಧಿಕಾರದಿಂದಲೇ ತೆಗೆದು ಹಾಕ್ಬೇಕು ಅಂತ ಕರೆ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಮುಯಿಜು ಇವೆಲ್ಲ ಆಧಾರರಹಿತ ಆರೋಪ ಅಂದಿದಾರೆ.

-masthmagaa.com

Contact Us for Advertisement

Leave a Reply