ಭಾರತಕ್ಕೆ ಮಾಲ್ಡೀವ್ಸ್‌ ಸಾಲ ಮನ್ನಾ ಮಾಡಿ ಅಂತೇಳಿದ ಮುಯಿಝು!

masthmagaa.com:

ಚೀನಾ ಜೊತೆ ಸೇರ್ಕೊಂಡು…ನಮಗೆ ಭಾರತದ ಅವಶ್ಯಕತೆಯಿಲ್ಲ. ನಮ್ಮ ದ್ವೀಪ ಪ್ರದೇಶದಲ್ಲಿ ಭಾರತೀಯ ಸೇನಾ ಸಿಬ್ಬಂದಿ ಇರೋದ್‌ ಬೇಡ ಅಂತಿದ್ದ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮದ್‌ ಮುಯಿಝು ಈಗ ಭಾರತ ಮುಂದೆ ಅಂಗಲಾಚಿದ್ದಾರೆ. ಭಾರತ ನಮ್ಮ ಆಪ್ತಮಿತ್ರ ಅಂತೇಳಿದ್ದಾರೆ. ಅಷ್ಟೇ ಅಲ್ಲ..ಭಾರತ ನಮ್ಮ ಸಾಲ ಮನ್ನ ಮಾಡಬೇಕು ಅಂತ ಬೇಡ್ಕೊಂಡಿದ್ದಾರೆ. ಇಂಟರ್‌ವ್ಯೂ ಒಂದ್ರಲ್ಲಿ ಮಾತನಾಡಿದ ಅವ್ರು, ʻಮಾಲ್ಡೀವ್ಸ್‌ಗೆ ನೆರವು ನೀಡುವಲ್ಲಿ ಭಾರತ ಪ್ರಮುಖ ಪಾತ್ರ ನಿಭಾಯಿಸಿದೆ. ಅವರು ಸಾಕಷ್ಟು ಯೋಜನೆಗಳನ್ನ ಮಾಲ್ಡೀವ್ಸ್‌ನಲ್ಲಿ ಕೈಗೊಂಡಿದ್ದಾರೆ. ಭಾರತ ನಮಗೆ ಬಹಳ ಕ್ಲೋಸ್‌ ಆಗಿರೋ ಮಿತ್ರರಾಷ್ಟವಾಗಿ ಮುಂದುವರೆಯಲಿದೆ…ಈ ಬಗ್ಗೆ ಯಾವ್ದೇ ಡೌಟ್‌ ಬೇಡ ಅಂತ ಭಾರತದ ಗುಣಗಾನ ಮಾಡಿದ್ದಾರೆ. ಜೊತೆಗೆ ಭಾರತದಿಂದ ಸತತವಾಗಿ ಪಡೆದ ಭಾರೀ ಮೊತ್ತದ ಲೋನ್‌ ಮರುಪಾವತಿಸೋ ಬಗ್ಗೆ ಮಾತನಾಡಿ. ʻನಾವು ಭಾರತದಿಂದ ಬೇಕಾಬಿಟ್ಟಿ…ದೊಡ್ಡ ಪ್ರಮಾಣದಲ್ಲಿ ಸಾಲ ಮಾಡ್ಕೊಂಡಿದ್ದೀವಿ. ಇದನ್ನ ಭರಿಸೋಕೆ ಮಾಲ್ಡೀವ್ಸ್‌ನಿಂದ ಸಾಧ್ಯವಿಲ್ಲ. ಸೋ ಈ ಸಾಲಗಳನ್ನ ಮನ್ನಾ ಮಾಡಿ….ಮಾಲ್ಡೀವ್ಸ್‌ಗೆ ಅವಕಾಶ ನೀಡಿ. ಈ ಕುರಿತು ಭಾರತ ಸರ್ಕಾರದ ಜೊತೆ ಮಾತುಕತೆ ನಡೆಸ್ತೀವಿ. ಭಾರತ ನಮ್ಮ ಸಾಲ ಮನ್ನಾ ಮಾಡುತ್ತೆ ಅನ್ನೋ ಭರವಸೆ ನಮಗಿದೆʼ ಅಂತ ಹೇಳಿದ್ದಾರೆ. ಅಲ್ದೇ ʻನಮ್ಮ ದ್ವೀಪದಲ್ಲಿ ಭಾರತ ಕೈಗೊಂಡಿರೋ ಪ್ರಾಜೆಕ್ಟ್‌ಗಳನ್ನ ನಿಲ್ಲಿಸ್ಬೇಡಿ. ಅದನ್ನ ಹೆಚ್ಚು ಸ್ಪೀಡ್‌ನಲ್ಲಿ ಮುಂದುವರೆಸಿʼ ಅಂತಾನೂ ಕೇಳಿಕೊಂಡಿದ್ದಾರೆ. ಇನ್ನು ಈ ಇಂಟರ್‌ವ್ಯೂನಲ್ಲಿ ಭಾರತೀಯ ಸೇನಾ ಸಿಬ್ಬಂದಿಯನ್ನ ವಾಪಾಸ್‌ ಕಳಿಸಿರೋ ಬಗ್ಗೆ ಪ್ರಶ್ನೆ ಕೂಡ ಮಾಡಲಾಯ್ತು. ಇದಕ್ಕೆ ಉತ್ತರಿಸಿದ ಮುಯಿಝು, ʻಇದೊಂದೇ ವಿಚಾರ ಭಾರತ ಮತ್ತು ಮಾಲ್ಡೀವ್ಸ್‌ ವಿವಾದಕ್ಕೆ ಕಾರಣವಾಯ್ತು. ಆದ್ರೆ ಭಾರತ ವಾಸ್ತವವನ್ನ ಒಪ್ಪಿಕೊಂಡು ತನ್ನ ಸೇನಾ ಸಿಬ್ಬಂದಿಯನ್ನ ವಾಪಾಸ್‌ ಕರೆಸಿಕೊಳ್ಳಲು ಒಪ್ಪಿಕೊಂಡಿದೆ. ಇದ್ಯಾವ್ದೇ ರೀತಿ ಪರ್ಸನಲ್‌ ಕಾರಣಕ್ಕೆ ಮಾಡಿರೋದಲ್ಲ….ರಾಷ್ಟ್ರೀಯ ಭದ್ರತೆಗೋಸ್ಕರ ಮಾಡಿರೋದುʼ ಅಂತ ತಮ್ಮ ಹಳೇ ವಾದವನ್ನ ಸಮರ್ಥಿಸಿಕೊಂಡಿದ್ದಾರೆ. ಅಂದ್ಹಾಗೆ ಮಾಲ್ಡೀವ್ಸ್‌ ಭಾರತದಿಂದ ಇದುವರೆಗೆ ಒಟ್ಟು 400.9 ಮಿಲಿಯನ್‌ ಡಾಲರ್‌ ಅಂದ್ರೆ 3.32 ಸಾವಿರ ಕೋಟಿ ರೂಪಾಯಿ ಸಾಲ ಮಾಡ್ಕೊಂಡಿದೆ. ಭಾರತ ಸಹಾಯ ಅನುದಾನ ಅಂತ ಅನೇಕ ರೀತಿಯಲ್ಲಿ ಮಾಲ್ಡೀವ್ಸ್‌ಗೆ ಸಹಾಯ ಕೂಡ ಮಾಡ್ತಿದೆ.

-masthmagaa.com

Contact Us for Advertisement

Leave a Reply