ಒಂದೇ ದಿನ ಎರಡು ಸಲ ವ್ಯಾಕ್ಸಿನ್! ವ್ಯಕ್ತಿ ಆಸ್ಪತ್ರೆಗೆ ದಾಖಲು!

masthmagaa.com:

ಉತ್ತರ ಪ್ರದೇಶದ ಲಲಿತ್‌ ಪುರದ ವ್ಯಕ್ತಿಯೊಬ್ಬರಿಗೆ, ನರ್ಸ್‌ ಒಬ್ಬರು ಬೇರೊಬ್ಬರ ಜೊತೆ ಪಟ್ಟಂಗ ಹೊಡೀತಾ ಐದೇ ನಿಮಿಷಗಳ ಅಂತರದಲ್ಲಿ ಎರಡೆರಡು ಡೋಸ್‌ ಕೊರೋನಾ ವ್ಯಾಕ್ಸಿನ್‌ ಹಾಕಿದ್ದಾರೆ. ರಾವರ್‌ ಪುರದ ವ್ಯಾಕ್ಸಿನೇಷನ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ. ‌ ವ್ಯಕ್ತಿಯೊಬ್ಬ ವ್ಯಾಕ್ಸಿನ್‌ ಹಾಕಿಕೊಳ್ಳುವ ಸಲುವಾಗಿ ವ್ಯಾಕ್ಸಿನೇಷನ್‌ ಸೆಂಟರ್‌ಗೆ ಬಂದಿದ್ದಾರೆ. ನರ್ಸ್‌ ವ್ಯಾಕ್ಸಿನೇಷನ್‌ ಹಾಕಿದ್ದಾರೆ. ನಂತ್ರ ಇನ್ನೊಬ್ಬರ ಬಳಿ ಮಾತಿನಲ್ಲಿ ತೊಡಗಿದ್ದಾರೆ. ಮತ್ತೆ ಪುನಃ ಯಾರು ಕೂತಿದ್ದಾರೆ ಏನು ನೋಡದೆ ವ್ಯಾಕ್ಸಿನ್‌ ಚುಚ್ಚಿದ್ದಾರೆ. ನಂತ್ರ ಆ ವ್ಯಕ್ತಿ ಮನೆಗೆ ಹೋಗಿದ್ದಾನೆ. ಮನೆಗೆ ಹೋದ ತಕ್ಷಣ ಸುಸ್ತು , ಜ್ವರ, ಮೈಕೈನೋವು ಶುರುವಾಗಿದೆ. ಲಸಿಕೆಹಾಕ್ಕೊಂಡಾಗ ಈ ರೀತಿಯಾಗೋದು ಕಾಮನ್. ಆದ್ರೆ ಇಲ್ಲಿ ವಿಪರೀತ ಜಾಸ್ತಿಯಾಗ್ಬಿಟ್ಟಿದೆ. ನಂತರ ವ್ಯಕ್ತಿ ನಂಗೆ ಎರಡೆರಡು ಸಲ ಇಂಜೆಕ್ಷನ್ ಚುಚ್ಚಿದ್ರು ಅಂತ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಆಗ ಮನೆಯವರು ಲಸಿಕೆ ಕೇಂದ್ರಕ್ಕೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ಕೂಡಲೇ ವ್ಯಕ್ತಿಯನ್ನು ಎಮರ್ಜೆನ್ಸಿ ವಾರ್ಡ್​​ಗೆ ದಾಖಲಿಸಲಾಯ್ತು. ಜೀವಕ್ಕೆ ಏನೂ ತೊಂದ್ರೆ ಆಗಿಲ್ಲ ಅಂತ ತಿಳಿದು ಬಂದಿದೆ. ದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ಕೊರೋನಾ ಹಾವಳಿ ಇದೆ. ಐದು ತಿಂಗಳಿಂದ ಲಸಿಕೆ ಅಭಿಯಾನ ನಡೀತಾ ಇದೆ. ಆದ್ರೂ 2 ಡೋಸ್ ಲಸಿಕೆ ನಡುವೆ ಗ್ಯಾಪ್ ಕೊಡಬೇಕು.. ಒಂದೇ ದಿನ ಚುಚ್ಚಿಸಿಕೊಳ್ಳೋದಲ್ಲ ಅಂತ ಆ ವ್ಯಕ್ತಿಗೆ ಗೊತ್ತಿಲ್ಲ ಅನ್ನೋದು ಆಶ್ಚರ್ಯದ ವಿಚಾರ..

-masthmagaa.com

Contact Us for Advertisement

Leave a Reply