masthmagaa.com:

ನೌಕಾಪಡೆಯ ಮಿಗ್‌-29k ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡಿದೆ. ಘಟನೆ ಗೋವಾ ಕರಾವಳಿಯಲ್ಲಿ ನಡೆದಿದೆ. ಅಪಘಾತದಲ್ಲಿ ಪೈಲಟ್‌ ಸುರಕ್ಷಿತವಾಗಿ ಪಾರಾಗಿದ್ದಾರೆ. ಮಿಗ್-29k‌ ದಿನನಿತ್ಯದ ವಿಹಾರದ ನಂತರ ಬೇಸ್‌ಗೆ ಮರಳುವ ಸಮಯದಲ್ಲಿ ಈ ಘಟನೆ ನಡೆದಿದೆ. ಪತನದ ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ. ಇನ್ನು 2019ರಿಂದ ಇಲ್ಲಿಯವರೆಗೆ ಮಿಗ್‌-29k ಏರ್‌ಕ್ರಾಫ್ಟ್‌ನ ನಾಲ್ಕು ಯುದ್ದವಿಮಾನಗಳುಅಪಘಾತವಾಗಿವೆ. ನವಂಬರ್‌ 2020ರಲ್ಲಿ ನಡೆದ ಅಪಘಾತದಲ್ಲಿ ಪೈಲೆಟ್‌ ಸಾವನ್ನಪ್ಪಿದದ್ರು. ಅಂದ್ಹಾಗೆ ಈ ಮಿಗ್‌-29k ರಷ್ಯಾ ನಿರ್ಮಿತ K-36D-3.5 ಎಜೆಕ್ಷನ್‌ ಸೀಟ್‌ನ್ನು ಹೊಂದಿದ ವಿಮಾನವಾಗಿದೆ.

-masth magaa

Contact Us for Advertisement

Leave a Reply