ಏ.14ರ ಬಳಿಕ ಭಾರತ ಲಾಕ್​ಡೌನ್​​ ಮುಂದುವರಿಯುತ್ತಾ..?

masthmagaa.com:

ದೆಹಲಿ: ಕೊರೋನಾ ವೈರಸ್ ಹಿನ್ನೆಲೆ ಭಾರತವನ್ನು ಲಾಕ್​ಡೌನ್ ಮಾಡಲಾಗಿದೆ. ಆದ್ರೆ ದೇಶದಲ್ಲಿ ದಿನೇ ದಿನೇ ಕೊರೋನಾ ಪೀಡಿತರು ಮತ್ತು ಈ ಮಹಾಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಹೀಗಾಗಿ ಏಪ್ರಿಲ್ 14ರ ಬಳಿಕ ಕೇಂದ್ರ ಸರ್ಕಾರ ಲಾಕ್​ಡೌನ್ ಮುಂದುವರಿಸುತ್ತಾ..? ಅನ್ನೋ ಪ್ರಶ್ನೆ ಜನರನ್ನು ಕಾಡುತ್ತಿದೆ.

ಈ ಬಗ್ಗೆ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಸಭೆ ನಡೆಸಿದ್ದರು. ಅಲ್ಲದೆ ಸಭೆಯಲ್ಲಿ ಲಾಕ್​ಡೌನ್​​ ಬಗ್ಗೆ ಚರ್ಚೆ ನಡೆಸಲಾಗಿತ್ತು. ಇದರಲ್ಲಿ ಪ್ರತಿ ಜಿಲ್ಲೆಯ ವರದಿಗಳನ್ನು ಪರಿಶೀಲಿಸಿದ ಬಳಿಕ ಲಾಕ್​​ಡೌನ್ ತೆರವು ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಅಂತ ತಿಳಿಸಲಾಗಿತ್ತು.

ಅಂದ್ರೆ ಏಪ್ರಿಲ್ 14ರ ಬಳಿಕ ಇಡೀ ದೇಶದಾದ್ಯಂತ ಒಂದೇ ಬಾರಿಗೆ ಲಾಕ್​ಡೌನ್ ತೆರವುಗೊಳಿಸೋ ಸಾಧ್ಯತೆ ತುಂಬಾ ಕಡಿಮೆ. ಬದಲಾಗಿ ಯಾವ ಭಾಗದಲ್ಲಿ ಕೊರೋನಾ ಸೋಂಕಿನ ಹಾವಳಿ ಹೆಚ್ಚಾಗಿದೆಯೋ..? ಯಾವ ಭಾಗದಲ್ಲಿ ಮುಂದಿನ ದಿನಗಳಲ್ಲಿ ಕೊರೋನಾ ಹರಡಬಹುದು ಎಂಬ ಅಂದಾಜು ಇದೆಯೋ ಅಂತಹ ಪ್ರದೇಶಗಳಲ್ಲಿ ಮಾತ್ರವೇ ಲಾಕ್​ಡೌನ್ ಮುಂದುವರಿಸುವ ಸಾಧ್ಯತೆ ಇದೆ.  ಜೊತೆಗೆ ರೈಲ್ವೆ ಮತ್ತು ವಿಮಾನಯಾನದ ಬಗ್ಗೆಯೂ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಏಪ್ರಿಲ್ 14ರ ಬಳಿಕವೂ ಇವುಗಳ ಮೇಲೆ ನಿರ್ಬಂಧ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.

-masthmagaa.com

Contact Us for Advertisement

Leave a Reply