ಗ್ಯಾಂಗ್‌ಸ್ಟರ್‌ ಮುಕ್ತಾರ್‌ ಅನ್ಸಾರಿ ಹೃದಯಾಘಾತದಿಂದ ಸಾವು!

masthmagaa.com:

ಉತ್ತರಪ್ರದೇಶದ ಗ್ಯಾಂಗ್‌ಸ್ಟರ್‌ ಹಾಗೂ ರಾಜಕಾರಣಿ ಮುಕ್ತಾರ್‌ ಅನ್ಸಾರಿ ಗುರುವಾರ ಜೈಲಲ್ಲೇ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ. ಈತನ ಸಾವಿನ ವಿಚಾರ ಯುಪಿಯಲ್ಲಿ ರಾಜಕೀಯವಾಗಿ ಕೋಲಾಹಲ ಸೃಷ್ಟಿಸಿದೆ. ಮೊದಲಿಗೆ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್‌ ಯಾದವ್‌, ಮುಕ್ತಾರ್‌ ಸಾವಿನ ಬಗ್ಗೆ ಸುಪ್ರಿಂ ಕೋರ್ಟ್‌ ಜಸ್ಟೀಸ್‌ ನೇತೃತ್ವದಲ್ಲಿ ತನಿಖೆ ಆಗ್ಬೇಕು ಅಂದಿದ್ರು. ಒಬ್ಬ ವ್ಯಕ್ತಿಯ ಜೀವಕ್ಕೆ ರಕ್ಷಣೆ ಕೊಡೋದು ಸರ್ಕಾರದ ಕೆಲಸ. ಒತ್ತೆಯಾಳು ಅಥ್ವಾ ಖೈದಿಯ ಸಾವು ಜನರಲ್ಲಿ ಕಾನೂನಿನ ಮೇಲಿರೋ ನಂಬಿಕೆಯನ್ನ ಅಳಿಸುತ್ತೆ ಅಂತೆಲ್ಲಾ ಹೇಳಿದ್ರು. ಇದಕ್ಕೆ ಬಿಜೆಪಿ ಕೆಂಡವಾಗಿದೆ. ʻಸಮಾಜವಾದಿ ಪಾರ್ಟಿ ಸರ್ಕಾರದ ಟೈಮಲ್ಲಿ ಗಾಜಿಪುರ್‌, ಜೌನ್‌ಪುರ್‌ ಸೇರಿ ಯುಪಿಯ ಹಲವು ನಗರಗಳು ಕ್ರಿಮಿನಲ್‌ಗಳ ಹಾಟ್‌ಸ್ಪಾಟ್‌ ಆಗಿದ್ವು. ಈ ಪಕ್ಷಗಳು ಕೋಮು ಧೃವೀಕರಣಕ್ಕೆ, ಅಂದ್ರೆ ಧರ್ಮಗಳ ಪ್ರತ್ಯೇಕತೆ, ಸಾಮರಸ್ಯ ಇಲ್ಲದ ವಾತಾವರಣಕ್ಕೆ ಕಾರಣವಾದ್ವು. ಪಿಎಂ ಮೋದಿ ಸರ್ಕಾರದ ಎಲ್ಲರನ್ನೂ ಒಳಗೊಂಡ ಸಬಲೀಕರಣದ ಎಫರ್ಟ್‌ನಿಂದ ಈಗ ಪರಿಸ್ಥಿತಿ ಬದಲಾಗಿದೆ ಅಂತ ಬಿಜೆಪಿ ಹೇಳಿದೆ. ಖುದ್ದು ಬಿಜೆಪಿ ಮುಸ್ಲಿಂ ಮುಖಂಡ ಮುಕ್ತಾರ್‌ ಅಬ್ಬಾಸ್‌ ನಖ್ವಿ ಈ ರೀತಿ ಹೇಳಿದ್ದಾರೆ. ಅಲ್ಲದೆ ಕ್ರಿಮಿನಲ್‌ ಮುಕ್ತಾರ್‌ ಅನ್ಸಾರಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ರೂ, ಆತನ ಮೇಲೆ ಕಾಳಜಿ ವಹಿಸ್ತಿರೋದು ನೋಡಿದ್ರೆ, SP, BSP, ಕಾಂಗ್ರೆಸ್‌ ಪಕ್ಷಗಳು ʻಮಾಫಿಯಾ ರಾಜ್‌ʼಗೆ ಸಪೋರ್ಟ್‌ ನೀಡ್ತಿದ್ದಿದ್ದು ಎದ್ದು ಕಾಣಿಸ್ತಿದೆ ಅಂತ ಬಿಜೆಪಿ ಹೇಳಿದೆ.

ಇನ್ನು ಜೈಲಲ್ಲಿದ್ದ ಮುಕ್ತಾರ್‌ ಅನ್ಸಾರಿಗೆ ರಂಜಾನ್‌ ಉಪವಾಸ ಮುಗಿಸಿದ ಮೇಲೆ ಆರೋಗ್ಯದ ಸ್ಥಿತಿ ಬಿಗಡಾಯಿಸಿತ್ತು. ನಂತರ ಈತನನ್ನ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ ಆಸ್ಪತ್ರೆಗೆ ತಲುಪು ಹೊತ್ತಿಗೆ ಈತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ನಂತರ ವೈದ್ಯರು ಈತ ಕಾರ್ಡಿಯಾಕ್‌ ಅರೆಸ್ಟ್‌.. ಹೃದಯ ಸ್ಥಂಭನದಿಂದ ಮೃತಪಟ್ಟಿದ್ದಾನೆ ಅಂತೇಳಿದ್ದಾರೆ. ಆದ್ರೆ ಈತನ ಪುತ್ರ ಉಮರ್‌ ಅನ್ಸಾರಿ ತಮ್ಮ ತಂದೆಗೆ ಜೈಲಲ್ಲಿ ವಿಷ ಹಾಕಲಾಗಿದೆ.. ಸ್ಲೋ ಪಾಯ್ಸನ್‌ ಕೊಡಲಾಗಿದೆ ಅಂತ ಆರೋಪಿಸಿದ್ರು. ಇದ್ರ ಬೆನ್ನಲ್ಲೇ ಕೋರ್ಟ್‌ ತನಿಖೆಗೆ ಆದೇಶ ನೀಡಿದ್ದು, ಒಂದು ತಿಂಗಳಲ್ಲಿ ರಿಪೋರ್ಟ್‌ ನೀಡುವಂತೆ ಕೇಳಿದೆ. ಶನಿವಾರ ಈತನ ದೇಹದ ಪೋಸ್ಟ್‌ ಮಾರ್ಟಮ್‌ ನಡೆಯಲಿದೆ ಅಂತ ತಿಳಿದುಬಂದಿದೆ. ಇನ್ನು 5 ಬಾರಿ ಸಮಾಜವಾದಿ ಪಾರ್ಟಿಯಿಂದ MLA ಆಗಿದ್ದ ಈತನ ಮೇಲೆ 60ಕ್ಕೂ ಹೆಚ್ಚು ಪೆಂಡಿಂಗ್‌ ಕ್ರಿಮಿನಲ್ ಕೇಸ್‌ಗಳಿದ್ದು, 2005ರಿಂದ ಈತ ಜೈಲು ವಾಸದಲ್ಲಿದ್ದ. ಈತನಿಗೆ 60 ವರ್ಷ ವಯಸ್ಸಾಗಿತ್ತು ಅಂತ ತಿಳಿದುಬಂದಿದೆ. ಈತ ಪೀಕ್‌ನಲ್ಲಿದ್ದಾಗ ಓಪನ್‌ ಜೀಪ್‌ನಲ್ಲಿ ಮಷಿನ್‌ ಬಂದೂಕು ಇಟ್ಕೊಂಡು ತಿರುಗಾಡ್ತಿದ್ದ. ಮಷಿನ್‌ ಬಂದೂಕಿನಿಂದ ಬಿಜೆಪಿ MLA ಒಬ್ರನ್ನ ಹತ್ಯೆ ಮಾಡೋಕೆ ಸುಪಾರಿ ಕೊಟ್ಟಿದ್ದ. ಆ ಹತ್ಯೆಯಲ್ಲಿ ಸುಮಾರು 500 ಗುಂಡುಗಳು ಬಳಕೆಯಾಗಿದ್ವು. ಈ ಟೈಮಲ್ಲಿ ಶೈಲೇಂದ್ರ ಸಿಂಗ್‌ ಅನ್ನೋ ಪೊಲೀಸ್‌ ಅಧಿಕಾರಿ ಒಬ್ರು ಈತನನ್ನ ಬಂಧಿಸಿ, ಬಂದೂಕು ವಶಪಡಿಸಿಕೊಂಡು, ಬಯೋತ್ಪಾದನಾ ತಡೆ ಕಾಯ್ದೆ ಅಥವಾ POTA ಅಡಿ ಈತನ ಮೇಲೆ ಕೇಸ್‌ ದಾಖಲಿಸಿದ್ರು. ಆಮೇಲೆ ಶೈಲೇಂದ್ರ ಸಿಂಗ್‌ ಅವರು ರಾಜಕೀಯ ಒತ್ತಡದಿಂದ ರಾಜಿನಾಮೆ ಕೂಡ ಕೊಡ್ಬೇಕಾಯ್ತು.

-masthmagaa.com

Contact Us for Advertisement

Leave a Reply