ಆರ್ಯನ್ ಖಾನ್​​​​ ನಶೆ ಸಾಮಗ್ರಿ ಖರೀದಿಗೆ ಅನನ್ಯ ಸಹಾಯ ಮಾಡಿದ್ರಾ?

masthmagaa.com:

ಮುಂಬೈ ಟು ಗೋವಾ ಹಡಗಿನಲ್ಲಿ ಮಾದಕ ಪಾರ್ಟಿ ಪ್ರಕರಣದಲ್ಲಿ ಇವತ್ತು ಬಾಲಿವುಡ್ ಬೆಡಗಿ ಅನನ್ಯ ಪಾಂಡೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇತ್ತೀಚೆಗಷ್ಟೇ ಜೈಲಿನಲ್ಲಿರೋ ಶಾರೂಖ್ ಖಾನ್ ಮಗ ಆರ್ಯನ್​​​ ಮತ್ತು ಅನನ್ಯ ಪಾಂಡೆಯ ವಾಟ್ಸಾಪ್ ಚಾಟ್​​ನ್ನು ಎನ್​ಸಿಬಿ ಕೋರ್ಟ್​​ಗೆ ಒಪ್ಪಿಸಿತ್ತು. 2018-19ರಲ್ಲಿ ನಡೆದ ಈ ಚಾಟ್​ನ್ನು ಆರ್ಯನ್ ಖಾನ್ ಮೊಬೈಲ್​​​ನಿಮದ ರಿಕವರ್ ಮಾಡಲಾಗಿತ್ತು. ಇದ್ರಲ್ಲಿ ಆರ್ಯನ್ ಖಾನ್​​​ಗೆ ಅನನ್ಯ ಪಾಂಡೆ ಮೂರು ಬಾರಿ ನಶಾ ಸಾಮಗ್ರಿಯನ್ನು ಪಡೆಯಲು ಸಹಾಯ ಮಾಡಿದ್ರು ಅಂತ ಎನ್​ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ವಿಚಾರಣೆ ವೇಳೆ ಅನನ್ಯ, ನಾನು ಯಾವುದೇ ರೀತಿಯ ಮಾದಕ ವಸ್ತು ತಗೊಂಡಿಲ್ಲ. ಪೂರೈಕೆ ಮಾಡಿಯೂ ಇಲ್ಲ ಅಂತ ಹೇಳಿದ್ದಾರೆ ಅಂತ ಗೊತ್ತಾಗಿದೆ. ನಿನ್ನೆಯಷ್ಟೇ ಬಾಂದ್ರಾದ ಅವರ ಮನೆ ಮೇಲೂ ದಾಳಿ ನಡೆಸಿ, ಎನ್​ಸಿಬಿ ಅಧಿಕಾರಿಗಳು ಅನನ್ಯ ವಿಚಾರಣೆ ನಡೆಸಿದ್ರು.

-masthmagaa.com

Contact Us for Advertisement

Leave a Reply