ಸಹೋದರರಿಂದಲೇ ವಿಧವೆ ಸಹೋದರಿಯ ಕೊಲೆ..ಅಂತ್ಯಸಂಸ್ಕಾರ..!

masthmagaa.com:

ಮುಜಾಫರ್​​ನಗರ: 35 ವರ್ಷದ ವಿಧವೆಯೊಬ್ಬರನ್ನು ಅವರ ಸಹೋದರರೇ ಕೊಲೆ ಮಾಡಿ, ಅಂತ್ಯಸಂಸ್ಕಾರ ಮಾಡಿದ್ದಾರೆ. ಉತ್ತರ ಪ್ರದೇಶದ  ಮುಜಾಫರ್​​ನಗರದ ಕೂಕ್ಡಾ ಗ್ರಾಮದಲ್ಲಿ ಈ ಅಮಾನುಷ ಘಟನೆ ವರದಿಯಾಗಿದೆ. ಮಹಿಳೆ ಬೇರೆ ಸಮುದಾಯದ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದೇ ಈ ಕೊಲೆಗೆ ಕಾರಣ ಅಂತ ತಿಳಿದುಬಂದಿದೆ.

ಮಹಿಳೆಯರ ಸಹೋದರರಾದ ಸುಮಿತ್ ಕುಮಾರ್ ಮತ್ತು ಸೋನು ವಿರುದ್ಧ ನ್ಯೂ ಮಂಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮಹಿಳೆಯ ಪ್ರಿಯಕರ ಝುಲ್ಫಿಕರ್ ಈ ಬಗ್ಗೆ ದೂರು ನೀಡಿದ್ದು, ಮಹಿಳೆಯನ್ನು ಆಕೆಯ ಸಹೋದರರು ಕೊಲೆ ಮಾಡಿ, ಪೊಲೀಸರಿಗೆ ಮಾಹಿತಿ ನೀಡದೇ ಅಂತ್ಯ ಸಂಸ್ಕಾರ ಮಾಡಿದ್ದಾರೆ ಅಂತ ಆರೋಪಿಸಿದ್ದ.

ಮಹಿಳೆಯ ಪತಿ 2 ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು. ಇದಾದ ಬಳಿಕ ಮಹಿಳೆ ಈ ಝುಲ್ಫಿಕರ್ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಆದ್ರೆ ಝಲ್ಫಿಕರ್ ಬೇರೆ ಸಮುದಾಯದವರಾಗಿದ್ದರಿಂದ ಮಹಿಳೆಯ ಸಹೋದರರು ಮದುವೆಗೆ ವಿರುದ್ಧವಾಗಿದ್ದರು.

masthmagaa.com:

Contact Us for Advertisement

Leave a Reply