ನಿಧಾನಕ್ಕೆ ಸೋಲಿನ ಕಡೆ ಮುಖ ಮಾಡುತ್ತಿದೆ ಮಯನ್ಮಾರ್ ಸೇನೆ

masthmagaa.com:

ಮಯನ್ಮಾರ್ ಸೇನಾ ಸರ್ಕಾರ 5636 ರಾಜಕೀಯ ಕೈದಿಗಳನ್ನ ಬಿಡುಗಡೆ ಮಾಡಿದೆ. ಅಕ್ಟೋಬರ್ 20ರ​ ಥಡಿಂಗ್ಯು ಹಬ್ಬದ ಸಂದರ್ಭದಲ್ಲಿ ಈ ಬಿಡುಗಡೆ ನಡೆದಿದೆ. ಫೆಬ್ರವರಿಯಲ್ಲಿ ಮಿಲಿಟರಿ ಕ್ಷಿಪ್ರಕ್ರಾಂತಿ ನಡೆದು ಸೇನೆ ಅಧಿಕಾರವನ್ನ ತನ್ನ ಕೈಗೆ ತಗೊಂಡಿತ್ತು. ನಾಯಕಿ ಆಂಗ್ ಸಾನ್ ಸೂ ಕ್ಯೀ ಸೇರಿದಂತೆ ಅವರ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿಯನ್ನ ನಾಯಲರನ್ನ ಬಂಧಿಸಿ ಜೈಲಿಗಟ್ಟಿತ್ತು. ಸೇನೆ ವಿರುದ್ಧ ಪ್ರತಿಭಟನೆ ಮಾಡಿದ ಜನರನ್ನೂ ಬಂಧಿಸಲಾಗಿತ್ತು. ಆದ್ರೆ ಚೀನಾ, ರಷ್ಯಾ ಬಿಟ್ರೆ ಅಂತಾರಾಷ್ಟ್ರೀಯವಾಗಿ ಮಯನ್ಮಾರ್ ಸೇನಾ ಸರ್ಕಾರಕ್ಕೆ ಯಾವುದೇ ಬೆಂಬಲ ಸಿಗಲಿಲ್ಲ. ಇತ್ತೀಚೆಗೆ ಆಸಿಯಾನ್ ಒಕ್ಕೂಟ ಕೂಡ ಮೀಟಿಂಗ್ ನಿಂದ ಮಯನ್ಮಾರ್ ಹೊರಗಿಟ್ಟಿತ್ತು. ಹೀಗಾಗಿ ಕಕ್ಕಾಬಿಕ್ಕಿಯಾಗಿರೋ ಮಯನ್ಮಾರ್ ಜುಂಟಾ, ಅಂದ್ರೆ ಸೇನಾ ಆಡಳಿತ, ಕೈಚೆಲ್ಲುತ್ತಿರೋ ಲಕ್ಷಣ ಕಾಣ್ತಿದೆ. ಅದರ ಮೊದಲ ಭಾಗವಾಗಿ 5600ಕ್ಕೂ ಅಧಿಕ ರಾಜಕೀಯ ಕೈದಿಗಳನ್ನ ಬಿಡುಗಡೆ ಮಾಡಿದೆ.

-masthmagaa.com

Contact Us for Advertisement

Leave a Reply