ಯಡಿಯೂರಪ್ಪ-ನಳಿನ್ ಕುಮಾರ್ ಕಟೀಲ್ ಮುಸುಕಿನ ಗುದ್ದಾಟ..!?

ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಅಧಿಕಾರಕ್ಕೆ ಏರುವಾಗ ಎಲ್ಲಾ ರೀತಿಯ ಬೆಂಬಲ ಕೊಡುತ್ತೇವೆ. ಹೆದರೋ ಅಗತ್ಯ ಇಲ್ಲ ಅಂದಿದ್ದವರು ಯಡಿಯೂರಪ್ಪ. ಆದ್ರೆ ಈಗ ನಳಿನ್ ಕುಮಾರ್ ಕಟೀಲ್ ಅವರೇ ಯಡಿಯೂರಪ್ಪ ಜೊತೆ ಮುಸುಕಿನ ಗುದ್ದಾಟ ಶುರು ಮಾಡಿದ್ದಾರೆ. ಒಂದು ಟೈಮಲ್ಲಿ ಯಡಿಯೂರಪ್ಪ ವಿರುದ್ಧ ಮಾತನಾಡಿ ಅಧಿಕಾರ ಕಳೆದುಕೊಂಡಿದ್ದ ನಿರ್ಮಲ್ ಕುಮಾರ್ ಸುರಾನ ಮತ್ತು ಎಂ.ಬಿ ಭಾನುಪ್ರಕಾಶ್ ಅವರನ್ನು ಪಕ್ಷದ ಉಪಾಧ್ಯಕ್ಷ ಸ್ಥಾನದಲ್ಲಿ ತಂದು ಕೂರಿಸಿದ್ದಾರೆ. ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ನಿರ್ಮಲ್ ಕುಮಾರ್ ಸಿಡಿದೆದ್ರೆ, ಯಡಿಯೂರಪ್ಪ ಎಲ್ಲರನ್ನು ಸಮನಾಗಿ ಕಾಣುತ್ತಿಲ್ಲ ಎಂದು ಭಾನುಪ್ರಕಾಶ್ ಆರೋಪಿಸಿದ್ದರು. ಹೀಗಾಗಿ ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ತೆಗೆಯಲಾಗಿತ್ತು. ನಂತರ ಅವರಿಗೆ ಉಪಾಧ್ಯಕ್ಷ ಸ್ಥಾನದ ಆಫರ್ ಕೊಟ್ರೂ ಕೂಡ ಅವರು ಒಪ್ಪಿರಲಿಲ್ಲ. ಈಗ ಪುನಃ ಅವರನ್ನೇ ತಂದು ಉಪಾಧ್ಯಕ್ಷರನ್ನಾಗಿ ಮಾಡುವಲ್ಲಿ ನಳಿನ್ ಯಶಸ್ವಿಯಾಗಿದ್ದಾರೆ.

Contact Us for Advertisement

Leave a Reply