ಅಮೆರಿಕದ ಬಾನಂಗಳದಲ್ಲಿ ವಿಚಿತ್ರ ಘಟನೆ! ಏನದು?

masthmagaa.com:

ಅಮೆರಿಕದ ಟೆಕ್ಸಾಸ್​​ನ ಬಾನಂಗಳದಲ್ಲಿ ವಿಚಿತ್ರವೊಂದು ಸಂಭವಿಸಿದೆ. ಇಲ್ಲಿನ ಸಾವಿರಾರು ಜನ ಹಾರುತ್ತಿರುವ ಬೆಂಕಿಯ ಉಂಡೆಯೊಂದನ್ನು ನೋಡಿದ್ದಾರೆ. ಇದ್ರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿವೆ. ಉಲ್ಕೆಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸೋ American Meteor Society ಪ್ರಕಾರ ಇಂಥಹ 213 ಘಟನೆಗಳು ವರದಿಯಾಗಿದ್ದು, ಈ ಪೈಕಿ ಮೂರು ಘಟನೆಗಳ ವಿಡಿಯೋಗಳು ಕೂಡ ಇವೆ. ಕೆಲವರು ಟೆಕ್ಸಾಸ್​ನಲ್ಲಿ ಈ ಬೆಂಕಿ ಉಂಡೆ ನೋಡಿದ್ರೆ, ಇನ್ನು ಕೆಲವರು ಒಕ್ಲಹೋಮ, ಮಿಸೂರಿ, ಅರ್​ಕಾನ್ಸಸ್ ಮತ್ತು ಲೂಸಿಯಾನಾದಲ್ಲಿ ನೋಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ವಿಡಿಯೋದಲ್ಲಿ ಮೂರು ಸೆಕೆಂಡ್​​​​​ನಷ್ಟು ಸಮಯ ಈ ಬೆಂಕಿ ಉಂಡೆ ಹಾರಾಡೋದು ಕಾಣಿಸುತ್ತೆ. ಕೆಲವರಂತೂ ಈ ಬೆಂಕಿ ಉಂಡೆ ತೇಲುವಾಗ ವಿಚಿತ್ರವಾದ ಶಬ್ದ ಕೂಡ ಬರ್ತಿತ್ತು ಅಂತ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ American Meteor Society ಈ ರೀತಿ ಹಾರೋ ಬೆಂಕಿ ಉಂಡೆ ಬೇರೆ ಏನೂ ಅಲ್ಲ. ಅದು ಉಲ್ಕಾ ಪಿಂಡಗಳು.. ಇದು ರಾತ್ರಿ ವೇಳೆ ಶುಕ್ರ ಗ್ರಹದಷ್ಟು ಹೊಳೆಯುತ್ತಿರುತ್ತೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply