ನಾವಲ್ನಿ ಜೀವ ತುಂಬಾ ಅಪಾಯದಲ್ಲಿದೆ: ವಿಶ್ವಸಂಸ್ಥೆ ತಜ್ಞರು

masthmagaa.com:

ಇದೇ ಪುಟಿನ್ ವಿರೋಧಿ ನಾಯಕ ಅಲೆಕ್ಸಿ ನಾವಲ್ನಿ ಸ್ಥಿತಿ ಗಂಭೀರವಾಗಿದೆ ಅಂತ ವಿಶ್ವಸಂಸ್ಥೆಯ ಹಕ್ಕುಗಳ ಕುರಿತ ತಜ್ಞರ ಗುಂಪೊಂದು ಎಚ್ಚರಿಸಿದೆ. ನಾವಲ್ನಿಯನ್ನು ಈ ಕೂಡಲೇ ರಷ್ಯಾದಿಂದ ಹೊರಗೆ ಕರೆತಂದು ವೈದ್ಯಕೀಯ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇದೆ. ನಾವಲ್ನಿ ಜೀವ ತುಂಬಾ ಅಪಾಯದಲ್ಲಿದೆ. ಜೈಲಿನಲ್ಲಿರೋವಾಗ ನಾವಲ್ನಿಯ ಜೀವ ಮತ್ತು ಆರೋಗ್ಯಕ್ಕೆ ರಷ್ಯಾ ಸರ್ಕಾರವೇ ಹೊಣೆಯಾಗಿರುತ್ತೆ ಅಂತ ಎಚ್ಚರಿಸಿದೆ. ಈ ನಡುವೆ ಅಲೆಕ್ಸಿ ನಾವಲ್ನಿ ಪರವಾಗಿ ಪ್ರತಿಭಟನೆಗೆ ಇಳಿದಿದ್ದ 1700ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆಯಲಾಗಿದೆ. ಅಂದಹಾಗೆ ಅಲೆಕ್ಸಿ ನಾವಲ್ನಿ ವಿಷಪ್ರಾಶನಕ್ಕೆ ಒಳಗಾಗಿ ಜರ್ಮನಿಯಲ್ಲಿ ಚಿಕಿತ್ಸೆ ಪಡೆದು, ರಷ್ಯಾಗೆ ಬರ್ತಿದ್ದಂತೆ ಅರೆಸ್ಟ್ ಮಾಡಲಾಗಿತ್ತು. ಇದೀಗ ಹಳೇ ಕೇಸ್ ಒಂದರಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ. ಆದ್ರೆ ಅನಾರೋಗ್ಯದಿಂದ ಬಳಲುತ್ತಿರೋ ನಾಲವ್ನಿಗೆ ಜೈಲಲ್ಲಿ ಸರಿಯಾಗಿ ಚಿಕಿತ್ಸೆ ನೀಡ್ತಿಲ್ಲ. ಹೀಗಾಗಿ ಅವರು ಮಾರ್ಚ್​ 31ರಿಂದ ಉಪವಾಸ ಸತ್ಯಾಗ್ರಹ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply