ನೌಕಾಪಡೆ ಹೆಲಿಕಾಪ್ಟರ್‌ನಲ್ಲಿಯೆ ಐಸಿಯು!

masthmagaa.com:

ಭಾರತೀಯ ನೌಕಾಪಡೆಯ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ನಲ್ಲಿ ಎಮ್ಐಸಿಯು ಅಳವಡಿಸಲಾಗಿದೆ. ಎಮ್ಐಸಿಯು ಅಂದ್ರೆ ಮೆಡಿಕಲ್ ಇಂಟೆನ್ಸಿವ್ ಕೇರ್ ಯುನಿಟ್ ಅಂತ. ಇದನ್ನ ನೇವಿಯ ಈ ಆಲ್ ವೆದರ್/ಅಂದ್ರೆ ಸರ್ವಋತು ಹೆಲಿಕಾಪ್ಟರ್ ಗೆನೇ ಅಳವಡಿಸಿರೋದರಿಂದ ಇನ್ಮುಂದೆ ಗಂಭೀರ ಸ್ಥಿತಿಯ ರೋಗಿಗಳನ್ನ ತುರ್ತಾಗಿ ಹೆಚ್ಚಿನ ಚಿಕಿತ್ಸೆಗೆ ದೂರದ ಪ್ರದೇಶಗಳಿಗೆ ಸಾಗಿಸೋಕೆ ಸಹಾಯ ಆಗುತ್ತೆ, ಯಾವುದೇ ಹವಾಮಾನ ಇದ್ರೂ ಸಾಗಿಸಬಹುದು ಅಂತ ನೇವಿ ಹೇಳಿದೆ. ಒಂದು ಹೆಲಿಕಾಪ್ಟರ್ ನಲ್ಲಿ ಹಾಕಿದ್ರೆ ಆದ್ರೆ ಇದರ ಲಾಭ ಎಷ್ಟು ಜನಕ್ಕೆ ಸಿಗುತ್ತೆ? ಪಡೆಯೋದು ಹೇಗೆ? ಯಾರಿಗೆಲ್ಲ ಸಿಗುತ್ತೆ? ಅದು ಸ್ಪಷ್ಟ ಇಲ್ಲ. ಬಟ್ ವೇಸ್ಟ್ ಅಂತೂ ಅಲ್ಲ. ನಮ್ಮ ಸೇನೆಯ ಯೋಧರಿಗೇನೆ ಇದು ಬೇಕು. ಇರಬೇಕು ಈ ಥರದ ವ್ಯವಸ್ಥೆ ನಮ್ಮ ಯೋಧರಿಗೆ.

-masthmagaa.com

Contact Us for Advertisement

Leave a Reply