ಸಲ್ಮಾನ್ ಖಾನ್ ನೋಡಲು 600 ಕಿಲೋಮೀಟರ್ ಸೈಕಲ್ ತುಳಿದ ಅಭಿಮಾನಿ..!

ಗುವಾಹಟಿ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರ ಅಭಿಮಾನಿಯೊಬ್ಬರು ಸಲ್ಮಾನ್ ಖಾನ್ ನೋಡಲು 600 ಕಿಲೋಮೀಟರ್ ಸೈಕಲ್ ಓಡಿಸಿದ್ದಾರೆ. ಸೈಕಲ್ ಮೂಲಕವೇ 600 ಕಿಲೋಮೀಟರ್ ದೂರ ಕ್ರಮಿಸಿ ಗುವಾಹಟಿ ತಲುಪಿದ್ದಾರೆ. 52 ವರ್ಷದ ಭುಪೇನ್​​ ಲಿಕ್ಸನ್​​ ಈ ಅಪರೂಪದ ಅಭಿಮಾನಿ. ಗುವಾಹಟಿಯಲ್ಲಿ ಫಿಲಂ ಫೇರ್ ಅವಾರ್ಡ್​ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ಸಲ್ಮಾನ್ ಖಾನ್ ಭಾಗಿಯಾಗಲಿದ್ದಾರೆ. ಹೀಗಾಗಿ ಫೆಬ್ರವರಿ 8ರಂದು ತಮ್ಮ ಊರಿನಿಂದ ಹೊರಟ ಭುಪೇನ್ ಫೆ. 13ಕ್ಕೆ ಗುವಾಹಟಿ ತಲುಪಿದ್ದಾರೆ. ಫೆಬ್ರವರಿ 15 ಅಂದ್ರೆ ನಾಳೆ ಫಿಲಂ ಫೇರ್ ಅವಾರ್ಡ್​ ಕಾರ್ಯಕ್ರಮ ನಡೆಯಲಿದೆ. ಅಂದಹಾಗೆ ಈ ಭುಪೇನ್  ಓರ್ವ ಸೈಕ್ಲಿಸ್ಟ್ ಆಗಿದ್ದು, ಈಗಾಗಲೇ 60 ನಿಮಿಷಗಳಲ್ಲಿ ಸ್ಟೇರಿಂಗ್ ಹಿಡಿಯದೇ 48 ಕಿಲೋಮೀಟರ್ ಕ್ರಮಿಸಿರುವ ದಾಖಲೆಯನ್ನು ಬರೆದಿದ್ದಾರೆ.

Contact Us for Advertisement

Leave a Reply