ಚೀನಾ ಜೊತೆ ಫ್ರೆಂಡ್ಶಿಪ್ ಅಂತ್ಯಗೊಳಿಸಲು ಅಮೆರಿಕ ಒತ್ತಡ: ಇಮ್ರಾನ್ ಖಾನ್

masthmagaa.com:

ಪಾಕಿಸ್ತಾನ ಚೀನಾ ಜೊತೆ ಒಳ್ಳೆ ಫ್ರೆಂಡ್ಶಿಪ್ ಹೊಂದಿರೋದಕ್ಕೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಒತ್ತಡ ಹೇರುತ್ತಿವೆ ಅಂತ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಚೀನೀ ಸರ್ಕಾರಿ ಮಾಧ್ಯಮ ಚೈನಾ ಗ್ಲೋಬಲ್ ಟೆಲಿವಿಷನ್ ನೆಟ್​ವರ್ಕ್​​​​ಗೆ ಕೊಟ್ಟಿರೋ ಒಂದು ಇಂಟರ್​​ವ್ಯೂನಲ್ಲಿ ಚೀನಾಗೆ ಬಕೆಟ್ ಹಿಡಿದಿದಿದ್ದಾರೆ. ಬಕೆಟ್ ಏನು ದೊಡ್ಡ ಹಂಡೇನೇ ಹಿಡಿದಿದ್ದಾರೆ. ನಾವು ಚೀನಾ ಜೊತೆ ಕ್ಲೋಸ್ ಆಗಿರೋದಕ್ಕೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳಿಂದ ಒತ್ತಡದ ಅನುಭವವಾಗ್ತಿದೆ. ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ಚೀನಾ ಜೊತೆ ಸಂಘರ್ಷ ಇದೆ. ಹೀಗಾಗಿ ನಮ್ಮಂತ ದೇಶಗಳಿಗೆ ನಮ್ ಜೊತೆ ಸೇರ್ಕೊಳಿ ಅಂತ ಒತ್ತಡ ಹೇರ್ತಿದ್ದಾರೆ. ಆದ್ರೆ ಇದು ಸರಿಯಲ್ಲ. ನಾವು ಯಾರ ಪಕ್ಷ ಯಾಕೆ ಸೇರ್ಬೇಕು. ಆದ್ರೆ ಪಾಕಿಸ್ತಾನ ಮತ್ತು ಚೀನಾದ ಸಂಬಂಧವನ್ನು ಹಾಳು ಮಾಡುವ ಯಾವ ಒತ್ತಡವೂ ಫಲ ನೀಡೋದಿಲ್ಲ. ಯಾವ ಒತ್ತಡಕ್ಕೂ ನಾವು ಕೇರ್ ಮಾಡಲ್ಲ ಅಂತ ಹೇಳಿದ್ದಾರೆ. ಅದೇ ರೀತಿ ಭಾರತದ ಹೆಸರು ಹೇಳದೇ ಮಾತನಾಡಿರೋ ಇಮ್ರಾನ್ ಖಾನ್​, ನಮ್ಮ ನೆರೆ ದೇಶದ ಜೊತೆಗೆ ಯಾವಾಗ ಕಿರಿಕ್ ಆದ್ರೂ ಚೀನಾ ನಮ್ಮ ಪರವಾಗಿ ನಿಲ್ಲುತ್ತೆ ಅಂತ ಹೇಳಿಕೊಂಡಿದ್ದಾರೆ. ಅಂದಹಾಗೆ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದಾಗ ಪಾಕ್ ಜೊತೆಗಿನ ಸಂಬಂಧ ತುಂಬಾ ಹಳಸಿ, ಪಾಕ್ ಚೀನಾಗೆ ಫುಲ್ ಹತ್ರ ಆಗಿತ್ತು. ಆದ್ರೆ ಆಮೇಲೆ ಅಮೆರಿಕದಲ್ಲಿ ಟ್ರಂಪ್ ಹೋಗಿ ಬೈಡೆನ್ ಬಂದ್ಮೇಲೆ ಏನಾದ್ರೂ ಚೂರು ಸಂಬಂಧ ಸರಿ ಹೋಗ್ಬೋದು ಅಂತ ಕಾದು ಕೂತಿತ್ತು ಪಾಕಿಸ್ತಾನ. ಜೋ ಬೈಡೆನ್ ಅಧಿಕಾರ ಸ್ವೀಕರಿಸುವ ಹೊತ್ತಲ್ಲಿ ವಿಶ್ ಮಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಬೈಡೆನ್ ಫೇವರಿಟ್ ಟಾಪಿಕ್ ಕ್ಲೈಮೇಟ್ ಚೇಂಜ್ ವಿಚಾರದಲ್ಲಿ ಸಹಕರಿಸೋದಾಗಿ ಹೇಳಿದ್ರು. ಆದ್ರೆ ಅದ್ಯಾವುದಕ್ಕೂ ಬೈಡೆನ್ ಕ್ಯಾರೆ ಅಂದಿಲ್ಲ. ಹೀಗಾಗಿ ಈಗ ಅಮೆರಿಕ ಸಹವಾಸ ಬೇಡ ಅಂತ ಮತ್ತೆ ಚೀನಾಗೆ ಬಕೆಟ್ ಹಿಡಿಯೋ ಕೆಲಸ ಮುಂದುವರಿಸಿದ್ದಾರೆ.

-masthmagaa.com

Contact Us for Advertisement

Leave a Reply