ಯೂರೋಪ್​​ನ ಹಲವೆಡೆ 3ನೇ ಅಲೆಯಬ್ಬರ ಶುರು!

masthmagaa.com:

ಒಮೈಕ್ರಾನ್​ ಆತಂಕ ನಡುವೆಯೇ ಜಗತ್ತಿನ ವಿವಿಧ ದೇಶಗಳಲ್ಲಿ ಕೊರೋನಾ ಕೇಸಸ್​ ಕೂಡ ಹೆಚ್ಚಾಗ್ತಿವೆ. ಹೊಸ ಹೊಸ ಅಲೆಗಳು ಏಳ್ತಿವೆ. ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ನಾಲ್ಕನೇ ಅಲೆ ಆರಂಭವಾಗಿದೆ. ಅದೇಥರ ಜರ್ಮನಿಯಲ್ಲೂ ಅಷ್ಟೇ ನಾಲ್ಕನೇ ಅಲೆ ಎದ್ದಿದೆ. ಕಳೆದ 24 ಗಂಟೆಯಲ್ಲಿ ಜರ್ಮನಿಯಲ್ಲಿ ಬರೋಬ್ಬರಿ 74 ಸಾವಿರ ಕೊರೋನಾ ಕೇಸ್​ ದೃಢಪಟ್ಟಿದೆ. ಫ್ರಾನ್ಸ್​ನಲ್ಲಿ ಐದನೇ ಅಲೆ ಏಳ್ತಿದ್ದು, ಇದು ಜನವರಿಯಲ್ಲಿ ಪೀಕ್​​ಗೆ ಹೋಗಲಿದೆ ಅಂತ ಫ್ರಾನ್ಸ್ ಆರೋಗ್ಯ ಸಚಿವರು ಹೇಳಿದ್ದಾರೆ. ಫ್ರಾನ್ಸ್​ನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಪ್ರತಿನಿತ್ಯ 45 ಸಾವಿರಕ್ಕೂ ಹೆಚ್ಚು ಕೇಸ್​ ವರದಿಯಾಗ್ತಿದೆ.
ಇನ್ನು ಕೊರೋನಾ ತವರು ಚೀನಾದಲ್ಲಿ ಮತ್ತೆ 96 ಕೇಸ್​ ವರದಿಯಾಗಿದೆ.

-masthmagaa.com

Contact Us for Advertisement

Leave a Reply