ದೇಶದಲ್ಲಿ ಹೆಚ್ಚಿದ ಕೊರೋನಾ! ಮೋದಿ ಮಹತ್ವದ ಸಭೆ

masthmagaa.com:

ದೇಶದಲ್ಲಿ ಕೊರೋನಾ ಹಾವಳಿ ದಿನೇ ದಿನೇ ಜಾಸ್ತಿಯಾಗ್ತಿದೆ. ಕಳೆದ 24 ಗಂಟೆಯಲ್ಲಿ ದೇಶದ 1.59 ಲಕ್ಷ ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ಪಾಸಿಟಿವಿಟಿ ದರ 10.21 ಪರ್ಸೆಂಟ್​​ಗೆ ಏರಿಕೆಯಾಗಿದೆ. ಇದ್ರ ಬೆನ್ನಲ್ಲೇ ಇವತ್ತು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೊರೋನಾ ಸಂಬಂಧ ಮಹತ್ವದ ಸಭೆ ನಡೆಸಲಾಯ್ತು.

ಹತ್ತಿರ ಬರ್ತಿರೋ ಕೇಂದ್ರದ ಬಜೆಟ್ ಅಧಿವೇಶನದ ಮೇಲೆ ಕೊರೋನಾ ಕರಿ ನೆರಳು ಬೀರಿದೆ. ಸಂಸತ್​​ನ 400ಕ್ಕೂ ಹೆಚ್ಚು ಮಂದಿ ಸಿಬ್ಬಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ಇಲ್ಲಿ ಸುಮಾರು 1409 ಮಂದಿ ಸಿಬ್ಬಂದಿ ಇದಾರೆ. ಜನವರಿ 4ರಿಂದ 8ರವರೆಗೆ 402 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಅವರಿಗೆ ಯಾವ ರೂಪಾಂತರಿ ಬಂದಿದೆ ಅನ್ನೋದನ್ನು ಪತ್ತೆಹಚ್ಚಲು ಸ್ಯಾಂಪಲ್​ನ್ನು ಜಿನೋಮ್ ಸೀಕ್ವೆನ್ಸಿಂಗ್​​ಗೆ ಕಳುಹಿಸಲಾಗಿದೆ.

ಫಿಲಿಬಿಟ್​​ ಬಿಜೆಪಿ ಸಂಸದ ವರುಣ್ ಗಾಂಧಿಗೂ ಕೊರೋನಾ ಸೋಂಕು ತಗುಲಿದೆ. ಈ ಬಗ್ಗೆ ಟ್ವೀಟ್ ಮಾಡಿರೋ ಅವರು, ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮತ್ತು ರಾಜಕೀಯ ಕಾರ್ಯಕರ್ತರಿಗೂ ಪ್ರಿಕಾಷನರಿ ಡೋಸ್ ಲಸಿಕೆ ಹಾಕಬೇಕು ಅಂತ ಒತ್ತಾಯಿಸಿದ್ದಾರೆ.

ಸುಪ್ರೀಂಕೋರ್ಟ್​​ನ ನಾಲ್ವರು ಜಡ್ಜ್​​ಗಳಿಗೂ ಕೊರೋನಾ ಸೋಂಕು ತಗುಲಿದೆ. ಈಗಾಗಲೇ ಕೋರ್ಟ್​ನ 150ಕ್ಕೂ ಹೆಚ್ಚು ಸಿಬ್ಬಂದಿಗೆ ಕೊರೋನಾ ಬಂದಿದ್ದು, ಕ್ವಾರಂಟೈನ್​​ಗೆ ಒಳಗಾಗಿದ್ದಾರೆ.)

ಇದ್ರ ಬೆನ್ನಲ್ಲೇ ಇವತ್ತು ಪ್ರಧಾನಿ ನರೇಂದ್ರ ಮೋದಿ ಕೊರೋನಾ ಸಂಬಂಧ ಮಹತ್ವದ ಸಭೆ ನಡೆಸಿದ್ದಾರೆ. ಇದ್ರಲ್ಲಿ ಗೃಹಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬ ಕೂಡ ಭಾಗಿಯಾಗಿದ್ರು. ಈ ಸಭೆಯಲ್ಲಿ ಮಾತಾಡಿದ ಪ್ರಧಾನಿ ಮೋದಿ, ಕೊರೋನಾದ ಹೊಸ ಥಳಿ ಗಮನದಲ್ಲಿಟ್ಟುಕೊಂಡು, ಜಾಗ್ರತೆ ವಹಿಸಬೇಕು. ಕೊರೋನಾ ಇನ್ನೂ ಹೋಗಿಲ್ಲ ಅಂತ ಎಚ್ಚರಿಸಿದ್ದಾರೆ ಅಂತ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply