RRR ಗೆ ಆಸ್ಕರ್‌: ಖರ್ಚಾಗಿದ್ದು ಲಕ್ಷ ಲಕ್ಷ

masthmagaa.com:

RRR ಸಿನಿಮಾ ಆಸ್ಕರ್‌ ಪ್ರಶಸ್ತಿ ಪಡೆದು ಇಡೀ ಇಂಡಿಯಾ ಹೆಮ್ಮೆ ಪಡುವಂತೆ ಆಗಿದ್ದು ನಿಮಗೆಲ್ಲಾ ಗೊತ್ತಿರೊ ವಿಷಯಾನೆ. 95ನೇ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ RRR ಸಿನಿಮಾ ” ನಾಟು ನಾಟು ” ಸಾಂಗ್‌ಗೆ ಬೆಸ್ಟ್‌ ಒರಿಜಿನಲ್‌ ಸಾಂಗ್‌ ಪ್ರಶಸ್ತಿ ಸಿಕ್ಕಿತ್ತು.
ಈ ಮೂಲಕ ಭಾರತೀಯರೇ ನಿರ್ಮಾಣ ಮಾಡಿದ ಚಿತ್ರವೊಂದಕ್ಕೆ ಮೊದಲ ಬಾರಿಗೆ ಆಸ್ಕರ್ ತಂದುಕೊಟ್ಟು SS rajamouli ಅಂಡ್ ಟೀಮ್ ಇತಿಹಾಸವನ್ನ ಸೃಷ್ಠಿ ಮಾಡಿದ್ದರು.
ಈ ಆಸ್ಕರ್ ಅಂತಿಂಥ ಅವಾರ್ಡ್ ಅಲ್ಲ ಸಿಕ್ಕಾಪಟ್ಟೆ ಕಾಸ್ಟ್ಲಿ ಅವಾರ್ಡ್. ಇದನ್ನ ಪಡೆದುಕೊಳ್ಳೋಕೆ ನೂರಾರು ಕಡೆ ಕ್ಯಾಂಪೇನ್ ಮಾಡಿ, ಬೇಕಾದಲ್ಲಿ ಚಿತ್ರದ ಪ್ರದರ್ಶನವನ್ನ ಅರೇಂಜ್ ಮಾಡಿಕೊಟ್ಟು ಕೊನೆಗೆ ಆಸ್ಕರ್ ಅವಾರ್ಡ್ ಮೆಟ್ಟಿಲಿಗೆ ತಲುಪೋದಕ್ಕೆ ಸುಮಾರು 80 ಕೋಟಿ ಖರ್ಚು ಆಗಿತ್ತು ಅನ್ನೋ ಸುದ್ದಿ ಮೊನ್ನೆ ಅಷ್ಟೇ ಹೊರಬಿದ್ದಿತ್ತು. ಇದನ್ನ ಸ್ವತಃ ನಿರ್ದೇಶಕ ರಾಜಮೌಳಿ ಅವರೇ ತಮ್ಮ ಕೈಯಿಂದ ಹಾಕಿದ್ರು ಅನ್ನೋದು ಕೂಡ ಬಹಿರಂಗ ಆಗಿತ್ತು. ಇದೇ ವಿಷಯಕ್ಕೆ RRR ನಿರ್ಮಾಪಕ DVV ದಾನಯ್ಯ ಮತ್ತು RRR ಟೀಮ್ ಮಧ್ಯೆ ಎಲ್ಲವೂ ಸರಿ ಇಲ್ಲ ಅನ್ನೋ ಗುಸು ಗುಸು ಕೂಡ ಕೇಳಿಬಂತು.

ಈಗ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಜಸ್ಟ್ ಭಾಗಿಯಾಗೋಕೆ RRR ಟೀಮ್ ಎಷ್ಟು ಹಣ ಚೆಲ್ಲಬೇಕಾಗಿ ಬಂತು ಅನ್ನೋದರ ಬಗ್ಗೆ ಒಂದು ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಆಸ್ಕರ್‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸೋದಕ್ಕೆ RRR ಟೀಮ್‌ ಇಂದ ರಾಜಮೌಳಿ, ಪತ್ನಿ ರಮಾ ರಾಜಮೌಳಿ, ಮಗ ಕಾರ್ತಿಕೇಯ, ಸೊಸೆ ಪೂಜಾ ಪ್ರಸಾದ್, ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ, ನಟ ಜೂನಿಯರ್ NTR ಇವರೆಲ್ಲರೂ ತಲಾ 20 ಲಕ್ಷ ಪೇ ಮಾಡಿದ್ರು ಅನ್ನೋ ಶಾಕಿಂಗ್‌ ಮಾಹಿತಿ ಹೊರ ಬಂದಿದೆ.

ಈ ಒಂದು ಅವಾರ್ಡ್ ಫಂಕ್ಷನ್ ನಲ್ಲಿ ಭಾಗವಹಿಸೋಕೆ ನಾಮಿನಿಗಳಿಗೆ ಅಂದ್ರೆ ಯಾರೆಲ್ಲ ನಾಮಿನೇಟ್ ಆಗಿರುತ್ತಾರಲ್ಲ ಅವರಿಗೆಲ್ಲ ಉಚಿತ ಟಿಕೆಟ್‌ ವ್ಯವಸ್ಥೆಯನ್ನ ಅಕಾಡೆಮಿಯವರೇ ಮಾಡ್ತಾರೆ. ಹಾಗಾಗಿ “ನಾಟು ನಾಟು” ಸಾಂಗ್‌ನ ಸಂಯೋಜಕ ಎಂಎಂ ಕೀರವಾಣಿ ಮತ್ತು ಗೀತರಚನೆಕಾರ ಚಂದ್ರಬೋಸ್ ಮತ್ತು ಅವರ ಪಾರ್ಟನರ್‌ಗಳಿಗೆ ಮಾತ್ರ ಉಚಿತ ಟಿಕೆಟ್‌ಗಳನ್ನು ನೀಡಲಾಯಿತು. ಆದರೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಳಿದ ಕಲಾವಿದರಿಗೆ ಉಚಿತ ಟಿಕೆಟ್‌ ವ್ಯವಸ್ಥೆ ಇರಲಿಲ್ಲ. ನಾಟು ನಾಟು ಸಾಂಗ್‌ ರಾಹುಲ್‌ ಸಿಪ್ಲಿಗುಂಜ್‌ ಮತ್ತು ಕಾಲ ಭೈರವ ಅವರು ಲೈವ್‌ ಪರ್ಫಾಮೆನ್ಸ್‌ ಮಾಡಿದ್ರು. ಅಲ್ಲದೇ ಈ ಕಾರ್ಯಕ್ರಮದಲ್ಲಿ ರಾಜಮೌಳಿ, ಅವರ ಪತ್ನಿ ರಮಾ ರಾಜಮೌಳಿ ಹಾಗೂ ಅವರ ಮಗ ಎಸ್‌.ಎಸ್‌. ಕಾರ್ತೀಕೇಯ ಮತ್ತು ಅವರ ಪತ್ನಿ ಪೂಜಾ ಪ್ರಸಾದ್‌, ರಾಮ್‌ಚರಣ್‌ ಮತ್ತು ಅವರ ಪತ್ನಿ ಉಪಾಸನ ಹಾಗೂ ಜ್ಯೂನಿಯರ್‌ ಎನ್‌.ಟಿ.ಆರ್‌ ಅವರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಈ ಕಾರ್ಯಕ್ರಮದಲ್ಲಿ ಭಾಗವಹಿಸೋದಕ್ಕೆ ಎಮ್.ಎಮ್‌ ಕೀರವಾಣಿ ಮತ್ತು ಚಂದ್ರಬೋಸ್‌ ಇವರಿಬ್ಬರ ಹೊರತಾಗಿ ಉಳಿದ ಎಲ್ಲರೂ ಕೂಡ ಒಂದು ಟಿಕೆಟ್‌ಗೆ ಪ್ರತಿಯೊಬ್ಬರು ತಲಾ 20ಲಕ್ಷ ರೂ. ಕೊಟ್ಟಿದ್ರು ಅಂತ ತಿಳಿದುಬಂದಿದೆ.

-masthmagaa.com

Contact Us for Advertisement

Leave a Reply