‘ಪಾಕಿಸ್ತಾನಕ್ಕೆ ಸೇರಬೇಕಂದ್ರೆ 1947ರಲ್ಲೇ ಸೇರುತ್ತಿದ್ವಿ’ – ಫಾರೂಕ್ ಅಬ್ದುಲ್ಲಾ

masthmagaa.com:

ಜಮ್ಮು-ಕಾಶ್ಮೀರಕ್ಕೆ ಈ ಹಿಂದೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಮರಳಿ ಪಡೆಯಲು ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಸೇರಿದಂತೆ ವಿವಿಧ ಪಕ್ಷಗಳು ಹೋರಾಟ ನಡೆಸುತ್ತಿವೆ. ಇದರ ನಡುವೆಯೇ ಮಾತನಾಡಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮಾತನಾಡಿ, ‘ಜಮ್ಮು-ಕಾಶ್ಮೀರ ಪಾಕಿಸ್ತಾನದ ಜೊತೆ  ಸೇರಬೇಕು ಅಂತಿದ್ರೆ 1947ರಲ್ಲೇ ಸೇರುತ್ತಿತ್ತು. ಅದನ್ನ ಯಾರೂ ಕೂಡ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ರೆ ನಮ್ಮ ದೇಶ ಮಹಾತ್ಮಾ ಗಾಂಧಿಯವರ ಭಾರತ. ಬಿಜೆಪಿಯ ಭಾರತ ಅಲ್ಲ’ ಅಂತ ಹೇಳಿದ್ದಾರೆ.

ಮತ್ತೊಂದುಕಡೆ ಒಮರ್ ಅಬ್ದುಲ್ಲಾ ಮಾತನಾಡಿ, ‘ಆರ್ಟಿಕಲ್​ 370 ಮತ್ತು 35A ತೆಗೆದು ಹಾಕುವುದರಿಂದ ಎಲ್ಲಾ ಸಮಸ್ಯೆಗಳೂ ಬಗೆಹರಿಯುತ್ತೆ ಅನ್ನೋ ಭ್ರಮೆಯಲ್ಲಿ ಇರಬೇಡಿ ಅಂತ ನಾವು ಹೇಳ್ತಾನೆ ಬಂದಿದ್ವಿ. ಇವೆರಡನ್ನು ರದ್ದು ಮಾಡಿರೋದು ಜಮ್ಮು-ಕಾಶ್ಮೀರದ ವಿಚಾರದಲ್ಲಿ ಇಟ್ಟ ಅತಿದೊಡ್ಡ ತಪ್ಪು ಹೆಜ್ಜೆಯಾಗಿದೆ. ನಮ್ಮ ನೆಲದಲ್ಲಿ ನಾವೇ ಸೇಫ್ ಇಲ್ಲ ಎನ್ನುವಂತಾಗಿದೆ. ಆರ್ಟಿಕಲ್​ 370 ಮತ್ತು 35A ತೆಗೆದು ಹಾಕಿದ ಬಳಿಕ ಇಲ್ಲಿನ ಜನ ದೇಶದ ಇತರ ಭಾಗಗಳ ಜನರಂತೆ ಆಗುತ್ತಾರೆ ಅಂತ ಹೇಳಲಾಗಿತ್ತು. ಆದ್ರೆ ಈಗ ಇಲ್ಲಿನ ಜನ ಮೊದಲಿಗಿಂತಲೂ ದೂರವಾಗಿದ್ದಾರೆ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply