masthmagaa.com:

ಭಯೋತ್ಪಾದಕರಿಗೆ ಆಶ್ರಯ ನೀಡುವ, ಉಗ್ರ ಚಟುವಟಿಕೆ ಆರ್ಥಿಕ ನೆರವು ನೀಡುವ, ಶಸ್ತ್ರಾಸ್ತ್ರಗಳನ್ನ ಪೂರೈಸುವ, ಭಾರತದ ಗಡಿಯಲ್ಲಿ ಉಗ್ರರನ್ನು ನುಸುಳಿಸುವ ಪಾಕಿಸ್ತಾನ ಭಯೋತ್ಪಾದನೆ ನಿರ್ಮೂಲನೆಯಲ್ಲಿ ದೊಡ್ಡ ಪ್ರಯತ್ನ ಮಾಡಿದೆ. ಅದನ್ನು ಇಡೀ ವಿಶ್ವ ಗುರುತಿಸಬೇಕು ಅಂತ ಪಾಕಿಸ್ತಾನದ ಚಡ್ಡಿ ದೋಸ್ತ್​ ಚೀನಾ ಹೇಳಿದೆ.

‘ಭಯೋತ್ಪಾದನೆ ಅನ್ನೋದು ಎಲ್ಲಾ ದೇಶಗಳು ಎದುರಿಸುತ್ತಿರುವ ಸಾಮಾನ್ಯ ಸವಾಲಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಪಾಕಿಸ್ತಾನ ದೊಡ್ಡ ಪ್ರಯತ್ನ ಮತ್ತು ತ್ಯಾಗ ಮಾಡಿದೆ. ಇದನ್ನ ವಿಶ್ವ ಸಮುದಾಯ ಗುರುತಿಸಬೇಕು ಮತ್ತು ಗೌರವಿಸಬೇಕು’ ಅಂತ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.

ಈ ಮೂಲಕ ತಾನು ಭಯೋತ್ಪಾದನೆಯನ್ನು ವಿರೋಧಿಸುತ್ತೆ ಅಂತ ಹೇಳುವ ಚೀನಾ ಭಯೋತ್ಪಾದಕರಿಗೆ ಆಶ್ರಯ ನೀಡುವ ಪಾಕ್​ ಪರವಾಗಿ ಮಾತನಾಡಿದೆ. ಅಂದ್ಹಾಗೆ ಪಾಕ್ ಮತ್ತು ಚೀನಾ ದೇಶಗಳು ಒಂದ್​ ರೀತಿ ಕುಚಿಕುಗಳು ಇದ್ದಂತೆ. ಆದ್ರೆ ಈ ಎರಡೂ ದೇಶಗಳು ಭಾರತದ ಜೊತೆ ಉತ್ತಮ ಸಂಬಂಧ ಹೊಂದಿಲ್ಲ.

-masthmagaa.com

Contact Us for Advertisement

Leave a Reply