ಶಾಲಾ ಪಠ್ಯಪುಸ್ತಕದಲ್ಲಿ ಮಲಾಲಾ ಫೋಟೋ ಕಂಡು ಪಾಕ್​ಗೆ ಶಾಕ್​!

masthmagaa.com:

ಮಾನವ ಹಕ್ಕುಗಳ ಹೋರಾಟಗಾತಿ ಮತ್ತು ನೋಬೆಲ್​ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯುಸುಫ್​ಝೈ ಫೋಟೋಗಳನ್ನ ಪ್ರಕಟಿಸಿದ್ದ ಶಾಲಾ ಪಠ್ಯ ಪುಸ್ತಕಗಳನ್ನ ಪಾಕಿಸ್ತಾನದ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಅಂದ್ಹಾಗೆ ಮೊನ್ನೆ ಸೋಮವಾರ ಮಲಾಲಾ ಯುಸುಫ್​ಝೈ 24ನೇ ವರ್ಷಕ್ಕೆ ಕಾಲಿಟ್ಟಿದ್ರು. ಈ ಹಿನ್ನೆಲೆ ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಟೆಕ್ಟ್ಸ್​​ಬುಕ್ ಬೋರ್ಡ್​ 7ನೇ ತರಗತಿಯ ಸಮಾಜಶಾಸ್ತ್ರ ಪುಸ್ತಕದಲ್ಲಿ ಪ್ರಮುಖ ವ್ಯಕ್ತಿಗಳ ಫೋಟೋಗಳನ್ನ ಪ್ರಿಂಟ್​ ಮಾಡಿತ್ತು. ಅದರಲ್ಲಿ ಮಲಾಲಾ ಯುಸುಫ್​ಜೈ ಫೋಟೋ ಕೂಡ ಇತ್ತು. ಇದರಿಂದ ರೊಚ್ಚಿಗೆದ್ದ ಅಧಿಕಾರಿಗಳು ಆಕೆಯ ಫೋಟೋ ಪ್ರಿಂಟ್​ ಆಗಿದ್ದ ಪುಸ್ತಕಗಳನ್ನ ಸೀಜ್ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಅಂದ್ಹಾಗೆ ಖೈಬರ್​ ಫಖ್ತುಂಖ್ವಾ ಪ್ರಾಂತ್ಯದ ಸ್ವಾಟ್​ ಕಣಿವೆಯವರಾದ ಮಲಾಲಾ ಯುಸುಫ್​ಝೈ ಅಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಹಕ್ಕುಗಳ ಪರವಾಗಿ ಹೋರಾಟ ಮಾಡಿದ್ರು. ಆದ್ರೆ ಇದು ಪಾಕಿಸ್ತಾನಕ್ಕೆ ಸಹಿಸೋಕೆ ಆಗಲಿಲ್ಲ. ಹೀಗಾಗಿ ದೇಶಬಿಟ್ಟು ವಿದೇಶದಲ್ಲಿರೋ ಮಲಾಲಾ. ಇವರಿಗೆ 2014ರಲ್ಲಿ ಅಂದ್ರೆ ತಮ್ಮ 17ನೇ ವಯಸ್ಸಿನಲ್ಲಿ ನೊಬೆಲ್ ಪ್ರಶಸ್ತಿ ಸಿಕ್ಕಿತ್ತು. ಈ ಮೂಲಕ ನೊಬೆಲ್​ ಪ್ರಶಸ್ತಿ ಪಡೆದ ಅತಿ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ರು.

-masthmagaa.com

Contact Us for Advertisement

Leave a Reply