ಭಾರತದಿಂದ ಅಫ್ಘಾನಿಸ್ತಾನಕ್ಕೆ ಗೋದಿ.. ದಾರಿ ಬಿಡ್ತೀವಿ ಎಂದ ಪಾಕ್!

masthmagaa.com:

ಭಾರತದಿಂದ ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನದ ಮೂಲಕ ಗೋಧಿ ಸಾಗಿಸೋ ಪ್ರಸ್ತಾವನೆಗೆ ಇಮ್ರಾನ್ ಖಾನ್ ಸರ್ಕಾರ ಗ್ರೀನ್ ಸಿಗ್ನಲ್ ನೀಡೋ ಸಾಧ್ಯತೆ ಇದೆ. ಅಫ್ಘನ್ ಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾನವೀಯತೆ ಆಧಾರದಲ್ಲಿ ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸ್ತಿದ್ದೀವಿ ಅಂತ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಸದ್ಯ ಪಾಕಿಸ್ತಾನ ಪ್ರವಾಸ ಕೈಗೊಂಡಿರೋ ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮಿರ್ ಖಾನ್ ಮುಠಾಕಿ ನೇತೃತ್ವದ ಜೊತೆ ಇಮ್ರಾನ್ ಖಾನ್ ಮಾತುಕತೆ ನಡೆಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಭಾರತ ಆಫರ್ ಮಾಡಿರೋ ಗೋಧಿಯನ್ನು ನಮ್ಮ ದೇಶದ ಮೂಲಕ ಹಾದು ಹೋಗಲು ಅವಕಾಶ ನೀಡಿ ಅನ್ನೋ ಅಫ್ಘನ್ ಸಹೋದರರ ಮನವಿಯನ್ನು ಪರಿಗಣಿಸುವ ಬಗ್ಗೆ ಪಾಕಿಸ್ತಾನ ಚಿಂತಿಸ್ತಿದೆ ಎಂದಿದ್ದಾರೆ. ಜೊತೆಗೆ ಅಫ್ಘಾನಿಸ್ತಾನ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಂದ ಹೊರಬರಲು ಪಾಕಿಸ್ತಾನ ಸಹಾಯ ಮಾಡಲಿದೆ ಅಂತ ಕೂಡ ಭರವಸೆ ನೀಡಿದ್ದಾರೆ. ಅಂದಹಾಗೆ ಭಾರತ 50 ಸಾವಿರ ಟನ್ ಗೋಧಿ ಸೇರಿದಂತೆ ಅಫ್ಘಾನಿಸ್ತಾನಕ್ಕೆ ಒಂದಷ್ಟು ಮಾನವೀಯ ನೆರವು ನೀಡೋದಾಗಿ ಹೇಳಿದೆ. ಆದ್ರೆ ಪಾಕಿಸ್ತಾನ ತನ್ನ ನೆಲದ ಮೂಲಕ ಯಾವುದೇ ಸರಕುಗಳು ಅಫ್ಘಾನಿಸ್ತಾನಕ್ಕೆ ಸಾಗಲು ಅನುಮತಿ ನೀಡಿರಲಿಲ್ಲ.

-masthmagaa.com

Contact Us for Advertisement

Leave a Reply