ನಮ್ಮ ಸೇನೆ ಇಲ್ಲದೇ ಇದ್ರೆ ನಮ್‌ ಕೈಯಲ್ಲಿ ಏನೂ ಆಗಲ್ಲ: ಪಾಕ್‌ ಪ್ರಧಾನಿ ಮಾತಿನ ಮರ್ಮ ಏನು?

masthmagaa.com:

ಇನ್ನೊಂದ್ಕಡೆ ತಮ್ಮ ಸೇನೆ ನಮ್ಮ ದೇಶಕ್ಕೆ ಹಣ ಈಸ್ಕೊಂಡು ಬರುವಲ್ಲಿ ದೊಡ್ಡ ಪಾತ್ರ ವಹಿಸ್ತಿದೆ ಅಂತ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಹಾಡಿ ಹೊಗಳಿದ್ದಾರೆ. ನಮ್ಮ ಸ್ನೇಹಿತರಾದ ಸೌದಿ ಅರೇಬಿಯಾ, ಹಾಗೂ ಯುಎಇಯಿಂದ ಈಗ ನಮಗೆ ಹಣ ಸಹಾಯ ಬರ್ತಿದೆ. ಅದನ್ನ ಈಸ್ಕೊಂಡು ಬರುವಲ್ಲಿ ನಮ್ಮ ಸೇನಾ ಮುಖ್ಯಸ್ಥ ಜನರಲ್‌ ಆಸೀಮ್ ಮುನೀರ್‌ ತುಂಬಾ ಶ್ರಮ ಹಾಕ್ತಿದ್ದಾರೆ.‌ ನಮಗೆ ಸಾಲ ಈಸ್ಕೊಂಡು ಬರುವಲ್ಲಿ ಅವರ ಪಾತ್ರ ನಿರ್ಣಾಯಕ ಅಂತ ಶೆಹಾಬಾಷ್‌ ಸರ್ಕಾರ ಪಾಕ್‌ ಸೇನಾ ಮುಖ್ಯಸ್ಥರಿಗೆ ಶಹಬಾಷ್‌ಗಿರಿ ಕೊಟ್ಟಿದ್ದಾರೆ. ಆ ಮೂಲಕ ಸೇನೆಯನ್ನ ಭಿಕ್ಷೆ ಬೇಡೋಕೆ ನಿಯೋಜನೆ ಮಾಡ್ತಿದ್ದೀವಿ, ಸೇನೆ ಮುಖ ತೋರಿಸ್ದೇ ನಮಗೆ ಒಂದು ನಯಾ ಪೈಸೆನೂ ಹುಟ್ಟೋದಿಲ್ಲ. ನಾವು ಮಾಡಬೇಕಾದ ಕೆಲಸವನ್ನ ಸೇನೆ ಮಾಡ್ತಾ ಇದೆ. ಸೇನೆನೆ ಪಾಕ್‌ ರಾಜಕಾರಣಿಗಳ ಗಾಡ್‌ಫಾದರ್‌ ಅನ್ನೋದನ್ನ ಪಾಕ್‌ನ ನಾಯಕರು ಘಂಟಾಘೋಷವಾಗಿ ಒಪ್ಪಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply