ಪಾಕಿಸ್ತಾನದಲ್ಲಿ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ! ಖಾನ್ ರಾಜೀನಾಮೆಗೆ ಆಗ್ರಹ

masthmagaa.com:

ಭಾರತದಲ್ಲಿ ಬೆಲೆ ಏರಿಕೆ ಗುಮ್ಮ ಜನರನ್ನು ಕಾಡ್ತಿದೆ. ಅತ್ತ ಪಾಕಿಸ್ತಾನದಲ್ಲೂ ಏನ್ ಕಡಿಮೆ ಇಲ್ಲ. ಬೆಲೆ ಏರಿಕೆ, ಹಣದುಬ್ಬರ, ಭ್ರಷ್ಟಾಚಾರ ಮತ್ತು ನಿರುದ್ಯೋಗ ಖಂಡಿಸಿ ಜನ ಪ್ರತಿಭಟನೆ ಶುರು ಮಾಡಿದ್ದಾರೆ. ಅವಾಮಿ ನ್ಯಾಷನಲ್ ಪಾರ್ಟಿ ಮತ್ತು ಜಮಿಯತ್ ಉಲೇಮ ಇ ಇಸ್ಲಾಂ ಫಜಲ್​ ಪಕ್ಷಗಳು ಪ್ರತ್ಯೇಕವಾಗಿ ಖೈಬರ್ ಪಖ್ತುಂಕ್ವಾದಲ್ಲಿ ಪ್ರತಿಭಟನೆ ನಡೆಸಿವೆ. ಒಂದೋ ಪ್ರಧಾನಿ ಇಮ್ರಾನ್ ಖಾನ್​, ಹಣದುಬ್ಬರ, ಭ್ರಷ್ಟಾಚಾರ ಮತ್ತು ನಿರುದ್ಯೋಗದ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಥವಾ ಈಗಿಂದೀಗಲೇ ಅಧಿಕಾರ ಬಿಟ್ಟು ಕೆಳಗಿಳಿಯಬೇಕು ಅಂತ ಆಗ್ರಹಿಸಿವೆ. ಅಗತ್ಯ ವಸ್ತುಗಳು, ಪೆಟ್ರೋಲಿಯಂ ಉತ್ಪನ್ನ, ವಿದ್ಯುತ್ ಮತ್ತು ಅನಿಲದ ಸುಂಕವನ್ನು ಪದೇ ಪದೇ ಹೆಚ್ಚಿಸಲಾಗ್ತಿದೆ. ತೆಹ್ರೀಕ್ ಇ ಇನ್ಸಾಫ್ ಸರ್ಕಾರದ ಆರ್ಥಿಕ ನೀತಿಗಳು ಫುಲ್ ಫೇಲ್ ಆಗೋಗಿದೆ. ಕಳೆದ 3 ವರ್ಷಗಳ ಆಡಳಿತದಲ್ಲಿ ಇಮ್ರಾನ್ ಖಾನ್ ಸರ್ಕಾರ ಬಡಜನರಿಗಾಗಿ ಏನೂ ಮಾಡ್ಲಿಲ್ಲ ಬದಲಾಗಿ ಕಡಿಮೆ ಆದಾಯ ಇರೋ ಜನರ ಜೀವನವನ್ನು ಮತ್ತಷ್ಟು ದುಸ್ಥರ ಮಾಡ್ಬಿಡ್ತು. ಅಗತ್ಯ ವಸ್ತುಗಳ ಬೆಲೆಯನ್ನು ತುರ್ತು ಆಧಾರದ ಮೇಲೆ ನಿಯಂತ್ರಿಸೋ ಅವಶ್ಯಕತೆ ಇದೆ. ಇಲ್ಲವಾದ್ರೆ ಇಮ್ರಾನ್ ಖಾನ್ ಪ್ರಧಾನಿ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ಅರ್ಹತೆ ಹೊಂದಿಲ್ಲ ಅಂತ ಕೂಡ ಪ್ರತಿಭಟನಾಕಾರರು ಒತ್ಥಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply