ದೆಹಲಿಯಲ್ಲಿ ಪರಿಣಿತಿ ಚೋಪ್ರಾ -ರಾಘವ್‌ ಚಡ್ಡ ನಿಶ್ಚಿತಾರ್ಥ!?

masthmagaa.com:

ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್‌ ಆದ್ಮಿ ಪಕ್ಷದ ಮೆಂಬರ್‌ ರಾಘವ್‌ ಚಡ್ಡಾ ಅವರ ಮದುವೆ ಮಾತುಕತೆ ಸದ್ಯಕ್ಕೆ ಬಾಲಿವುಡ್‌ನ ಲೇಟೇಸ್ಟ್‌ ಅಪ್‌ಡೇಟ್‌ಗಳಲ್ಲಿ ಒಂದು . ಕೆಲವು ದಿನಗಳ ಹಿಂದಷ್ಟೇ ಇವರಿಬ್ಬರು ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ರು. ಇದರ ನಂತರ ಇವರಿಬ್ಬರ ನಡುವೆ ಲವ್‌ ಅಫೇರ್‌ ಇದೆ ಇವರಿಬ್ಬರು ಮದುವೆ ಆಗ್ತಾರೆ ಅನ್ನೊ ವದಂತಿ ಎಲ್ಲಾ ಕಡೆ ಹಬ್ಬಿತ್ತು. ಈಗ ಸದ್ಯಕ್ಕೆ ಲವ್‌ ಅಫೇರ್‌ ನಿಂದ ಒಂದು ಸ್ಟೆಪ್‌ ಮುಂದೆ ಹೋಗಿ ಇವರಿಬ್ಬರೂ ಎಂಗೇಜ್‌ಮೆಂಟ್‌ ಮಾಡಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಈಗ ಬಾಲಿವುಡ್‌ ಅಂಗಳದಲ್ಲಿ ಸಾಕಷ್ಟು ಸದ್ದು ಮಾಡ್ತಾ ಇದೆ.

ಹೌದು, ಈ ಜೋಡಿ ಇದೇ ವಾರ ಎಂಗೇಜ್‌ಮೆಂಟ್‌ ಮಾಡಿಕೊಳ್ಳಲಿದ್ದಾರೆ ಅನ್ನೋ ಮಾಹಿತಿ ವರದಿಯಾಗಿದೆ. ರಾಘವ್‌ ಚಡ್ಡಾ ಮತ್ತು ಪರಿಣಿತಿ ಎಂಗೇಜ್‌ಮೆಂಟ್‌ ಮಾಡಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನ ಅಧಿಕೃತಗೊಳಿಸಲಿದ್ದಾರೆ ಎನ್ನುವಂತ ಮಾತುಗಳು ಕೇಳಿಬರ್ತಾ ಇದೆ. ಕೆಲವು ಮೂಲಗಳ ಪ್ರಕಾರ ಇವರ ಎಂಗೇಜ್‌ಮೆಂಟ್‌ ದೆಹಲಿಯಲ್ಲಿ ನಡೆಯಲಿದೆ, ಮತ್ತು ಕೇವಲ ಹತ್ತಿರದವರಿಗೆ ಮಾತ್ರ ಆಹ್ವಾನವಿದೆ ಇರತ್ತೆ. ಇಲ್ಲಿ ತನಕ ತಮ್ಮ ಸಂಬಂಧವನ್ನ ಗುಟ್ಟಾಗಿ ಇಟ್ಟುಕೊಂಡ ಈ ಜೋಡಿ ತಮ್ಮ ಎಂಗೇಜ್‌ಮೆಂಟ್‌ ತಯಾರಿಯಲ್ಲಿದ್ದಾರೆ. ಇನ್ನೂ ಪರಿಣಿತಿಯವರ ಕಸಿನ್‌ ಆದಂತ ಪ್ರಿಯಾಂಕಾ ಚೊಪ್ರಾ ಮತ್ತು ಹಸ್ಬಂಡ್‌ ನಿಕ್‌ ಜೊನಸ್‌ ತಮ್ಮ ಮಗಳಾದ ಮಾಲ್ತಿ ಮೇರಿಯನ್ನ ಮೊದಲ ಬಾರಿಗೆ ಇಂಡಿಯಾಗೆ ಕರೆದುಕೊಂಡು ಬಂದಿದ್ದಾರೆ, ಪ್ರಿಯಾಂಕಾ ಅವರ ಕುಟುಂಬ, ಪರಿಣಿತಿಯವರ ಎಂಗೇಜ್‌ಮೆಂಟ್‌ನಲ್ಲಿ ಭಾಗವಹಿಸೋಕೆ ಅಂತಾನೇ ಬಂದಿದ್ದಾರೆ ಎಂದು ಕೂಡ ಹೇಳಲಾಗ್ತಾಇದೆ.

ಇದರ ನಡುವೆಯೇ ಪರಿಣಿತಿ ಚೋಪ್ರಾ ಅವರು ರಾಜಕಾರಣಿಯನ್ನ ಮದುವೆ ಆಗೋದಿಲ್ಲ ಅಂತ ಈ ಹಿಂದೆ ಸಂದರ್ಶನದಲ್ಲಿ ಹೇಳಿದ ಹಳೆ ವಿಡಿಯೋ ಎಲ್ಲಾ ಕಡೆ ವೈರಲ್‌ ಆಗ್ತಾ ಇದೆ . ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಇವರ ಮದುವೆ ಹಾಗೂ ಎಂಗೇಜ್‌ಮೆಂಟ್‌ ವಿಚಾರ ಹೆಚ್ಚಾಗಿ ಕೇಳಿ ಬರ್ತಾ ಇರುವಂತಹ ಹೊತ್ತಲ್ಲೇ ಈ ವಿಡಿಯೋ ವೈರಲ್‌ ಆಗಿದೆ. ಇ ಹಿಂದೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪರಿಣಿತಿ ಚೋಪ್ರಾ “ನನಗೆ ಯಾವುದೇ ರಾಜಕಾರಣಿಯನ್ನ ಮದುವೆ ಆಗೋಕೆ ಇಷ್ಟ ಇಲ್ಲ, ಪೊಲಿಟಿಷಿಯನ್‌ಗಿಂತ ನನಗೆ ತುಂಬಾ ಒಳ್ಳೆ ಆಪ್ಷನ್ಸ್‌ ಇದೆ. ನಾನು ಮದುವೆ ಆಗೋ ಹುಡುಗ ಹೀಗೆ ಇರಬೇಕು ಅಂತ ಒಂದಿಷ್ಟು ಕ್ವಾಲಿಟಿಗಳನ್ನ ನಾನು ನೋಟ್‌ ಮಾಡಿಕೊಂಡಿದ್ದೇನೆ. ಅವನು ಫನ್ನಿ ಆಗಿರಬೇಕು, ನನ್ನ ಮೇಲೆ ಹಾಗೂ ನನ್ನ ಕೆಲಸದ ಮೇಲೆ ಅವನಿಗೆ ಗೌರವ ಇರಬೇಕು, ತನ್ನ ಜೀವನವನ್ನ ತಾನೇ ಕಟ್ಟಿಕೊಂಡವನಾಗಿರಬೇಕು, ಬೇರೆಯವರ ಹಂಗಿನಲ್ಲಿ ಇರಬಾರದು. ಇಂತ ಗುಣಗಳಿರುವ ವ್ಯಕ್ತಿಗಳು ನನಗೆ ಇಷ್ಟ ಆಗ್ತಾರೆ, ಇಂತಹವರನ್ನೇ ನಾನು ಮದುವೆ ಆಗೋಕೆ ಇಷ್ಟ ಪಡ್ತೀನಿ . ಆದರೆ ಯಾವುದೇ ಕಾರಣಕ್ಕೂ ಒಬ್ಬ ಪೊಲಿಟಿಷಿಯನ್‌ನ್ನ ಮದುವೆ ಆಗೋಲ್ಲ” ಅಂತ ಹೇಳಿದ್ರು. ಪರಿಣಿತಿ ಮತ್ತು ರಾಘವ್‌ ಮದುವೆ ಹಾಗೂ ಎಂಗೇಜ್‌ಮೆಂಟ್‌ ಮಾತುಕತೆ ಜಾಸ್ತಿ ಆದ ಬೆನ್ನಲ್ಲೇ ಈ ವಿಡಿಯೋ ಸಖತ್‌ ವೈರಲ್‌ ಆಗ್ತಾ ಇದೆ.

-masthmagaa.com

Contact Us for Advertisement

Leave a Reply