ಸದ್ದಿಲ್ಲದೆ ಜಾಸ್ತಿಯಾಗುತ್ತಿದೆ ತೈಲ ದರ! ಇವತ್ತು ಎಷ್ಟಾಯ್ತು?

masthmagaa.com:

ಒಂದ್ಕಡೆ ಹಿಜಬ್, ಹಲಾಲ್, ಟಿಪ್ಪು ಅಂತ ಧರ್ಮ ದಂಗಲ್ ನಡೀತಾ ಇದ್ರೆ ಮತ್ತೊಂದ್ಕಡೆ ಪೆಟ್ರೋಲ್ ಡೀಸೆಲ್ ದರ ಸದ್ದಿಲ್ಲದಂತೆ ಏರಿಕೆಯಾಗ್ತಿದೆ. ಕಳೆದ ಕೆಲವು ದಿನಗಳ ಟ್ರೆಂಡ್‌ನಂತೆ ಇವತ್ತೂ ಕೂಡ ಪೆಟ್ರೋಲ್‌ ಡೀಸೆಲ್‌ ದರವನ್ನ 80 ಪೈಸೆ ಏರಿಸಲಾಗಿದೆ, ಇದರೊಂದಿಗೆ ತೈಲ ದರ ಕಳೆದ ಹತ್ತು ದಿನಗಳಲ್ಲಿ ಒಟ್ಟು ಆರೇಳು ರೂಪಾಯಿ ಜಾಸ್ತಿಯಾದಂತಾಗಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 107.30 ರೂಪಾಯಿ ಆಗಿದೆ, ಇನ್ನು ಡೀಸೆಲ್‌ ಪ್ರತಿ ಲೀಟರ್‌ಗೆ 90.49 ರೂಪಾಯಿ ಆಗಿದೆ. ಇದನ್ನ ವಿರೋಧಿಸಿ ಇವತ್ತು ಕಾಂಗ್ರೇಸ್‌ ದೇಶಾದ್ಯಂತ ಪ್ರತಿಭಟನೆ ನಡೆಸಿದೆ. ದೆಹಲಿಯ ವಿಜಯ್‌ ಚೌಕ್‌ನಲ್ಲಿ ಪ್ರತಿಭಟನೆಯಲ್ಲಿ ಭಾಗವಹಸಿದ ಕಾಂಗ್ರೇಸ್‌ ನಾಯಕ ರಾಹುಲ್‌ ಗಾಂಧಿ, ಸರ್ಕಾರ ತೈಲ ದರಗಳನ್ನ ಕಂಟ್ರೋಲ್‌ ಮಾಡ್ಬೇಕು. ಆದ್ರೆ ಅವ್ರು ಬಡವರಿಂದ ಹಣ ಕದ್ದು ಉದ್ಯಮಿಗಳಿಗೆ ಕೊಡ್ತಿದ್ದಾರೆ ಅಂತ ಕಿಡಿಕಾರಿದ್ದಾರೆ. ಇನ್ನು ಬೆಂಗಳೂರಲ್ಲೂ ಕೂಡ ಡಿಕೆ ಶಿವಕುಮಾರ್​​​ ನೇತೃತ್ವದಲ್ಲಿ ಕಾಂಗ್ರೇಸ್‌ ಬೈಕ್‌ ಉಲ್ಟಾ ಹಿಡಿದು, ಕಾಲಿ ಸಿಲಿಂಡರ್‌ ಹಿಡಿದು ಪ್ರತಿಭಟನೆ ನಡೆಸಿದೆ. ಕಾಂಗ್ರೇಸ್‌ ಅಷ್ಟೇ ಅಲ್ಲದೇ ವಿರೋಧ ಪಕ್ಷಗಳಾದ ಡಿಎಂಕೆ, ಸಿಪಿಐ, ಸಿಪಿಐ-ಎಂ ಮತ್ತು ಟಿಆರ್‌ಎಸ್‌ ಕೂಡ ತೈಲ ಬೆಲೆಯೇರಿಕೆ ವಿರುದ್ಧ ಧ್ವನಿ ಎತ್ತಿದ್ದು, ಸತತ ದರ ಏರಿಕೆ ವಿರೋಧಿಸಿ ಲೋಕಸಭೆಯಿಂದ ವಾಕ್‌ಔಟ್‌ ಮಾಡಿವೆ.

ಇನ್ನೊಂದ್‌ ಕಡೆ ಬಾಬಾ ರಾಮದೇವ್‌ 2014ರಲ್ಲಿ ಪೆಟ್ರೋಲ್‌ 40 ರೂಪಾಯಿಗೆ, ಸಿಲಿಂಡರ್‌ 300 ರೂಪಾಯಿಗೆ ಸಿಗಬೇಕು.. ಅಂತಹ ಸರ್ಕಾರ ತನ್ನಿ ಅಂತ ಬಿಜೆಪಿ ಪರವಾಗಿ ಹೇಳಿದ್ರು. ಇವತ್ತು ಅದೇ ಪ್ರಶ್ನೆಯನ್ನು ಪತ್ರಕರ್ತರು ಕೇಳಿದಾಗ ಸಿಡಿಮಿಡಿಗೊಂಡ ಬಾಬಾ, ಹೂ ಹೇಳಿದ್ದೆ.. ಈವಾಗ ಏನ್‌ ಮಾಡ್ತೀಯ ನೀನು. ಇನ್ನೊಂದ್‌ ಸರಿ ಈ ರೀತಿ ಕೇಳಿದ್ರೆ ಸರಿ ಇರಲ್ಲ.. ಬಾಯಿ ಮುಚ್ಕೊಂಡಿರು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply