ವಿಶ್ವದ ಅತ್ಯಂತ ಜನಪ್ರಿಯ ನಾಯಕರಲ್ಲಿ ಪ್ರಧಾನಿ ಮೋದಿಗೆ ಅಗ್ರಸ್ಥಾನ!

masthmagaa.com:

ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವ್ರು ಮತ್ತೆ ನಂಬರ್‌ ಒನ್‌ ಸ್ಥಾನ ಅಲಂಕರಿಸಿದ್ದಾರೆ. ನ್ಯೂಯಾರ್ಕ್‌ನ ಮಾರ್ನಿಂಗ್‌ ಕನ್ಸಲ್ಟ್‌ ಇತ್ತೀಚೆಗೆ ಸರ್ವೇಯೊಂದನ್ನ ನಡೆಸಿ ಈ ಮಾಹಿತಿ ನೀಡಿದೆ. ಇದ್ರ ಪ್ರಕಾರ ನರೇಂದ್ರ ಮೋದಿಯವ್ರಿಗೆ ಅತೀ ಹೆಚ್ಚು… ಅಂದ್ರೆ 78% ಅಪ್ರೂವಲ್‌ ರೇಟಿಂಗ್‌ ಸಿಕ್ಕಿದೆ. ಈ ಸರ್ವೇಯನ್ನ 2024ರ ಜನವರಿ 30 ಮತ್ತು ಫೆಬ್ರುವರಿ 5ರ ಮಧ್ಯದಲ್ಲಿ ಸಂಗ್ರಹಿಸಲಾದ ಡೇಟಾವನ್ನ ಬಳಸಿ ನೀಡಲಾಗಿದೆ. ಈ ಮೂಲಕ ಚುನಾವಣೆ ಹೊತ್ತಲ್ಲೇ ಮೋದಿಯವರ ಅಪ್ರೂವಲ್‌ ರೇಟಿಂಗ್‌ನ ಈ ಸುದ್ದಿ ರಾಜಕೀಯವಾಗಿ ಕೂಡ ಮಹತ್ವ ಪಡ್ಕೋತಿದೆ. ಇನ್ನು ಈ ಲಿಸ್ಟ್‌ನಲ್ಲಿ ಮೆಕ್ಸಿಕೋ ಅಧ್ಯಕ್ಷರಾದ ಆಂಡ್ರೆಸ್‌ ಮ್ಯಾನುಯೆಲ್‌ ಲೋಪೆಜ್‌ ಒಬ್ರಡಾರ್‌ 64% ಅಪ್ರೂವಲ್‌ ರೇಟಿಂಗ್‌ ಪಡೆದು 2ನೇ ಸ್ಥಾನದಲ್ಲಿದ್ದಾರೆ. ಇನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ರಿಗೆ ಕೇವಲ 37% ಅಪ್ರೂವಲ್‌ ರೇಟಿಂಗ್‌ ಸಿಕ್ಕಿದ್ದು, ಇವ್ರು ಈ ಲಿಸ್ಟ್‌ನಲ್ಲಿ 9ನೇ ಸ್ಥಾನದಲ್ಲಿದ್ದಾರೆ.

-masthmagaa.com

Contact Us for Advertisement

Leave a Reply