masthmagaa.com:

ಪ್ರಧಾನಿ ನರೇಂದ್ರ ಮೋದಿಯವರು ಇವತ್ತು ಭಾರತದ ಪ್ರಮುಖ ಕೊರೋನಾ ಲಸಿಕೆಯ ಘಟಕಗಳಿಗೆ ಭೇಟಿ ನೀಡಿ, ಕೊರೋನಾ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆಯ ಪ್ರಕ್ರಿಯೆಯ ಪರಿಶೀಲನೆ ನಡೆಸಿದರು. ಅಹ್ಮದಾಬಾದ್​​ ನ ಜೈಡಸ್‌ ಬಯೋಟೆಕ್‌ ಪಾರ್ಕ್‌, ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಕಂಪನಿ ಹಾಗೂ ಪುಣೆಯ ಸೀರಂ ಇನ್ಸಿಟ್ಯೂಟ್‌ಗೆ ಭೇಟಿ  ನೀಡಿ ಅಲ್ಲಿನ ಲಸಿಕಾ ತಜ್ಞರ ಜೊತೆ ಮಾತುಕತೆ ನಡೆಸಿದರು. ಈ ವೇಳೆ ದೇಶವನ್ನ ಕೊರೋನಾ ಮುಕ್ತಗೊಳಿಸುವಲ್ಲಿ ಲಸಿಕಾ ತಯಾರಿಕಾ ಕಂಪನಿಗಳು ನಡೆಸುತ್ತಿರುವ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿ, ಲಸಿಕೆ ವಿತರಣೆಗೆ ಮಾಡಿಕೊಂಡಿರೋ ಸಿದ್ಧತೆ, ಅದಕ್ಕಿರುವ ಸವಾಲುಗಳು ಮತ್ತು ಅಗತ್ಯವಿರುವ ರೋಡ್​​ಮ್ಯಾಪ್​​ ರೆಡಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಸಿದರು.

ಅಂದ್ಹಾಗೆ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಆಕ್ಸ್​ಫರ್ಡ್​ ಮತ್ತು ಆಸ್ಟ್ರಾಝೆನೆಕಾ ಜೊತೆಗೆ ಸೇರಿಕೊಂಡು ‘ಕೋವಿಶೀಲ್ಡ್’ ಲಸಿಕೆಯನ್ನ ಉತ್ಪಾದಿಸುತ್ತಿದೆ. ಭಾರತ್​ ಬಯೋಟೆಕ್​ ಕಂಪನಿ ಐಸಿಎಂಆರ್ ಜೊತೆ ಸೇರಿಕೊಂಡು ‘ಕೋವಾಕ್ಸಿನ್’ ಲಸಿಕೆ ಹಾಗೂ ಝೈಡಸ್ ಕ್ಯಾಡಿಲಾ ಕಂಪನಿ ‘ZyCoV-D’ ಎಂಬ ಲಸಿಕೆ ಅಭಿವೃದ್ಧಿಪಡಿಸುತ್ತಿದೆ.

 

-masthmagaa.com

Contact Us for Advertisement

Leave a Reply