masthmagaa.com:

ಭಾರತದಲ್ಲಿ ಕೊರೋನಾ ಲಸಿಕೆಯ ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯನ್ನ ವೈಯಕ್ತಿಕವಾಗಿ ಪರಿಶೀಲಿಸಲು ಪ್ರಧಾನಿ ಮೋದಿ ನಾಳೆ 3 ರಾಜ್ಯದ 3 ನಗರಗಳಿಗೆ ಭೇಟಿ ನೀಡಲಿದ್ದಾರೆ. ಅಹಮದಾಬಾದ್​ನ ಝೈಡಸ್ ಬಯೋಟೆಕ್ ಪಾರ್ಕ್​, ಹೈದರಾಬಾದ್​ನ ಭಾರತ್ ಬಯೋಟೆಕ್ ಮತ್ತು ಪುಣೆಯ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾಗೆ ಭೇಟಿ ನೀಡಲಿದ್ದಾರೆ. ದೇಶವು ಕೊರೋನಾ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಹಂತವನ್ನ ಪ್ರವೇಶಿಸುತ್ತಿದ್ದಂತೆಯೇ ಲಸಿಕೆ ಉತ್ಪಾದನೆಯ ಈ ಘಟಕಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ ಅಂತ ಪ್ರಧಾನಿ ಕಚೇರಿ ತಿಳಿಸಿದೆ. ಭೇಟಿ ವೇಳೆ ದೇಶದಲ್ಲಿ ಲಸಿಕೆ ಹಾಕಲು ಮಾಡಿಕೊಂಡಿರುವ ಸಿದ್ಧತೆ, ಚಾಲೆಂಜಸ್​ ಮತ್ತು ರೋಡ್​ಮ್ಯಾಪ್​ ಬಗ್ಗೆ ವಿಜ್ಞಾನಿಗಳೊಂದಿಗೆ ಪ್ರಧಾನಿ ಚರ್ಚೆ ನಡೆಸಲಿದ್ದಾರೆ.

ಅಂದ್ಹಾಗೆ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಆಕ್ಸ್​ಫರ್ಡ್​ ಮತ್ತು ಆಸ್ಟ್ರಾಝೆನೆಕಾ ಜೊತೆಗೆ ಸೇರಿಕೊಂಡು ‘ಕೋವಿಶೀಲ್ಡ್’ ಲಸಿಕೆಯನ್ನ ಉತ್ಪಾದಿಸುತ್ತಿದೆ. ಭಾರತ್​ ಬಯೋಟೆಕ್​ ಕಂಪನಿ ಐಸಿಎಂಆರ್ ಜೊತೆ ಸೇರಿಕೊಂಡು ‘ಕೋವಾಕ್ಸಿನ್’ ಲಸಿಕೆ ಹಾಗೂ ಝೈಡಸ್ ಕ್ಯಾಡಿಲಾ ಕಂಪನಿ ‘ZyCoV-D’ ಎಂಬ ಲಸಿಕೆ ಅಭಿವೃದ್ಧಿಪಡಿಸುತ್ತಿದೆ.

-masthmagaa.com

Contact Us for Advertisement

Leave a Reply