masthmagaa.com:

ದೇಶದಲ್ಲಿ ನಿನ್ನೆಯಿಂದ ಕೊರೋನಾ ಲಸಿಕೆಯ ಎರಡನೇ ಹಂತದ ಅಭಿಯಾನ ಆರಂಭವಾಗಿದೆ. ಮೊದಲಿಗರಾಗಿ ಪ್ರಧಾನಿ ಮೋದಿಯೇ ಲಸಿಕೆ ಚುಚ್ಚಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ. ಆದ್ರೆ ದೇಶದ ಪ್ರಧಾನಿಗೆ ಲಸಿಕೆ ಚುಚ್ಚೋಕೆ ನರ್ಸ್​ಗಳು​ ಸ್ವಲ್ಪ ನರ್ವಸ್ ಆಗಿರಬಹುದು ಅಂದುಕೊಂಡ ಮೋದಿ ಅವರನ್ನ ನಗಿಸೋಕೆ ಟ್ರೈ ಮಾಡಿದ್ದಾರೆ. ಏನ್ ಮಾಡಿದ್ದಾರೆ ಅಂದ್ರೆ, ‘ರಾಜಕಾರಣಿಗಳು ಸಾಮಾನ್ಯವಾಗಿ ದಪ್ಪ ಚರ್ಮದವರು. ಸೋ ಲಸಿಕೆ ಚುಚ್ಚಲು ದಪ್ಪ ಸೂಜಿ ಏನಾದ್ರೂ ಬಳಸುತ್ತಿದ್ದೀರಾ?’ ಅಂತ ಕೇಳಿದ್ದಾರೆ. ಇದು ತಕ್ಷಣ ನರ್ಸ್​ಗಳಿಗೆ ಅರ್ಥವಾಗದಿದ್ದರೂ ಇಲ್ಲ ಅಂತ ಉತ್ತರಿಸಿದ್ದಾರೆ. ಬಳಿಕ ಅವರಿಗೆ ಅದನ್ನ ಅರ್ಥ ಮಾಡಿಸಿದ ಪ್ರಧಾನಿ ಮೋದಿ, ಸಾಮಾನ್ಯವಾಗಿ ರಾಜಕಾರಣಿಗಳು ದಪ್ಪ ಚರ್ಮದವರಾಗಿರುತ್ತಾರೆ. ಸೋ ನನಗೆ ಲಸಿಕೆ ಚುಚ್ಚಲು ದಪ್ಪ ಸೂಜಿಯನ್ನ ಬಳಸುತ್ತಿದ್ದೀರಾ? ಅಂತ ಕೇಳಿದ್ದಾರೆ. ಆಗ ಪಕ್ಕದಲ್ಲಿದ್ದ ನರ್ಸ್​ಗಳು ನಕ್ಕಿದ್ದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply