ಮತ್ತೊಮ್ಮೆ ಮದುವೆಯಾದ ಬಹುಭಾಷಾ ನಟ ಪ್ರಕಾಶ್ ರಾಜ್

masthmagaa.com:

ಬಹುಭಾಷಾ ನಟ ಪ್ರಕಾಶ್ ರಾಜ್​ ಮತ್ತೊಮ್ಮೆ ಮದ್ವೆಯಾಗಿದ್ದಾರೆ. ಮತ್ತೊಮ್ಮೆ ಅಂದ್ರೆ ತಮ್ಮ ಪತ್ನಿ ಪೋನಿ ವರ್ಮಾರನ್ನ ಎರಡನೇ ಸಲ ಮದ್ವೆಯಾಗಿದ್ದಾರೆ. ಕಾರಣ, ಮಗ ವೇದಾಂತ್ ತನ್ನ ಪೋಷಕರು ಮದ್ವೆಯಾಗೋದನ್ನ ನೋಡ್ಬೇಕು ಅಂತ ಕೇಳಿಕೊಂಡಿದ್ನಂತೆ. ಹೀಗಾಗಿ ತಮ್ಮ ಮದ್ವೆಯ 11ನೇ ಆನಿವರ್ಸರಿ ದಿನ ಮತ್ತೊಮ್ಮೆ ಮದ್ವೆಯಾಗಿ ಮಗನ ಕಣ್ಣು ತಂಪು ಮಾಡಿದ್ದಾರೆ ಪ್ರಕಾಶ್​ ರಾಜ್​. ಈ ಮದ್ವೆಗೆ ಪ್ರಕಾಶ್​​ ರಾಜ್​ರ ಮೊದಲ ಹೆಂಡ್ತಿಯ ಇಬ್ಬರು ಹೆಣ್ಣು ಮಕ್ಕಳು ಕೂಡ ಬಂದಿದ್ರು. ಅಂದ್ಹಾಗೆ ಪ್ರಕಾಶ್​ ರಾಜ್​ರ ಮೊದಲ ಹೆಂಡ್ತಿ ಲಲಿತಾ ಕುಮಾರಿ. ಅವರಿಗೆ 2009ರಲ್ಲಿ ವಿಚ್ಛೇದನ ಕೊಟ್ಟಿದ್ರು. ನಂತ್ರ ಪೋನಿ ವರ್ಮಾರನ್ನ ಮದ್ವೆಯಾಗಿದ್ರು.

-masthmagaa.com

Contact Us for Advertisement

Leave a Reply