ಯುವರಾಣಿ ಡಯಾನ ಮದುವೆಗೆ ಹಾಕಿದ್ದು ಇದೇ ಬಟ್ಟೆ ನೋಡಿ!

masthmagaa.com:

ಬಕಿಂಗಮ್​ ಪ್ಯಾಲೇಸ್​​ನ ಆರೆಂಜರಿಯಲ್ಲಿ ಇಂದಿನಿಂದ Royal Style in the Making ಅನ್ನೋ ವಸ್ತು ಪ್ರದರ್ಶನ ಶುರುವಾಗಿದೆ. ಇದ್ರಲ್ಲಿ ಪ್ರಿನ್ಸ್ ಡಯಾನಾ ಮದುವೆಗೆ ಧರಿಸಿದ್ದ ಗೌನ್ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 1981ರಲ್ಲಿ ಪ್ರಿನ್ಸ್ ಚಾರ್ಲ್ಸ್​​ ಮದುವೆಯಾಗೋವಾಗ ಈ ಡ್ರೆಸ್ ಹಾಕಿದ್ರು ಪ್ರಿನ್ಸ್ ಡಯಾನ.. ಐವರಿ ಬಣ್ಣದ ಸಿಲ್ಕ್ ಡ್ರೆಸ್ ಇದಾಗಿದ್ದು, ಇದಕ್ಕೆ 25 ಉದ್ದದ ವೇಲ್ ಇದೆ.. ವೇಲ್ ಅಂದ್ರೆ ನೋಡಿ ಈ ರೀತಿ ಎಳ್ಕೊಂಡು ಹೋಗ್ತಾರಲ್ವಾ ಅದು.. ಇದನ್ನು ಡೇವಿಡ್ ಮತ್ತು ಎಲಿಜಬೆತ್ ಇಮ್ಯಾನ್ಯುವೆಲ್ ಎಂಬ ಡಿಸೈನರ್​ಗಳು ರೆಡಿ ಮಾಡಿದ್ದು, ಮದುವೆ ನಂತರ ಲಾಕರ್​ನಲ್ಲಿ ಇಡಲಾಗಿತ್ತು. ಹೀಗಾಗಿ ಮದ್ವೆ ಟೈಮಲ್ಲಿ ಫುಲ್ ಬ್ರೈಟ್ ಇದ್ದ ಈ ಡ್ರೆಸ್​​ ಬಣ್ಣ ಈಗ ಸ್ವಲ್ಪ ಡಲ್ ಆಗಿದೆ. ಬರೀ ಡಯಾನಾ ಮಾತ್ರವಲ್ಲ ಬೇರೆ ಉಡುಪುಗಳನ್ನು ಕೂಡ ಪ್ರದರ್ಶನದಲ್ಲಿ ಇಡಲಾಗಿದೆ. ಇನ್ನು ಬ್ರಿಟನ್ ರಾಣಿ 2ನೇ ಎಲಿಜಬೆತ್ ರಾಣಿಯಾಗಿ ಮುಂದಿನ ವರ್ಷಕ್ಕೆ 70 ವರ್ಷ ಆಗ್ತಿದೆ. ಸೋ ಬಕಿಂಗಮ್​ ಪ್ಯಾಲೇಸ್​​ನಲ್ಲಿ ಸಂಭ್ರಮಾಚರಣೆಗೆ ಸಿದ್ಥತೆ ಶುರುವಾಗಿದೆ. ಅಂದಹಾಗೆ ಎಲಿಜಬೆತ್​ 70 ವರ್ಷ ರಾಣಿಯಾಗಿ ಪೂರೈಸಿದ ಏಕೈಕ ರಾಣಿಯಾಗಿದ್ದಾರೆ. ಇವರು 1952ರ ಫೆಬ್ರವರಿ 6ರಂದು ತಮ್ಮ 25ನೇ ವಯಸ್ಸಲ್ಲಿ ರಾಣಿಯಾಗಿದ್ರು.

-masthmagaa.com

Contact Us for Advertisement

Leave a Reply