ಪ್ರಿಯಾಂಕಾ ಗಾಂಧಿ ಮಕ್ಕಳ ಇನ್​ಸ್ಟಾಗ್ರಾಂ ಹ್ಯಾಕ್ ಆಗಿಲ್ಲ: ತನಿಖೆಯಲ್ಲಿ ಬಯಲು

masthmagaa.com:

ಕೇಂದ್ರ ಸರ್ಕಾರ ನನ್ನ ಮಕ್ಕಳ ಇನ್​ಸ್ಟಾಗ್ರಾಂ ಖಾತೆಗಳನ್ನು ಕೂಡ ಹ್ಯಾಕ್ ಮಾಡ್ತಿದೆ ಅಂತ ಪ್ರಿಯಾಂಕಾ ಗಾಂಧಿ ಹೇಳಿದ್ದು ಸುಳ್ಳು ಅಂತ ಮೂಲಗಳು ತಿಳಿಸಿವೆ. ಈ ಸಂಬಂಧ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿತ್ತು. ಅದರಂತೆ ಸಿಇಆರ್​ಟಿ ಅಂದ್ರೆ Computer Emergency Response Team ತನಿಖೆ ನಡೆಸಿತ್ತು. ತನಿಖೆಯಲ್ಲಿ ಪ್ರಿಯಾಂಕಾ ಗಾಂಧಿ ಮಕ್ಕಳ ಇನ್​ಸ್ಟಾಗ್ರಾಂ ಹ್ಯಾಕ್ ಆಗಿಲ್ಲ ಅನ್ನೋದು ಗೊತ್ತಾಗಿದೆ. ಅಂದಹಾಗೆ ಪ್ರಿಯಾಂಕಾ ಗಾಂಧಿ ಈ ಬಗ್ಗೆ ದೂರೇನೂ ನೀಡಿರಲಿಲ್ಲ. ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ರು ಅಷ್ಟೆ..

-masthmagaa.com

Contact Us for Advertisement

Leave a Reply