ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್! ಯಾಕೆ..? ಯಾವಾಗ..?

masthmagaa.com:

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊಳ್ತಿದ್ದಾರೆ. ವಾರ್ಷಿಕ ಶೃಂಗಸಭೆಯೊಂದ್ರಲ್ಲಿ ಭಾಗಿಯಾಗಲು ಡಿಸೆಂಬರ್ 6ರಂದು ಭಾರತಕ್ಕೆ ಬರೋ ಸಾಧ್ಯತೆ ಇದ್ದು, ಕೊರೋನಾ ಶುರುವಾದ ಬಳಿಕ ಪುಟಿನ್​​ರ 2ನೇ ವಿದೇಶ ಪ್ರವಾಸ ಇದಾಗಿದೆ. ಈ ಮೂಲಕ ಉಭಯದೇಶಗಳ ನಡುವಿನ ಸೈನ್ಯ ಮತ್ತು ತಾಂತ್ರಿಕ ಸಹಕಾರವನ್ನು ಮುಂದುವರಿಸಲು ವೇದಿಕೆ ಸಿದ್ಧವಾಗೋ ಸಾಧ್ಯತೆ ಇದೆ. ಪುಟಿನ್ ಭಾರತ ಪ್ರವಾಸಕ್ಕೂ ಮುನ್ನ ಮಾಸ್ಕೋದಲ್ಲಿ ಉಭಯದೇಶಗಳ ರಕ್ಷಣಾ ಮತ್ತು ವಿದೇಶಾಂಗ ಸಚಿವರು ಟು ಪ್ಲಸ್​​ ಟು ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ರಷ್ಯಾದಿಂದ ಭಾರತಕ್ಕೆ ಎಸ್​​ 400ನ ಮೊದಲ ಬ್ಯಾಚ್​ ಡೆಲಿವರಿ ನೀಡೋ ಸಾಧ್ಯತೆ ಕೂಡ ಇದೆ. ಎಸ್​​400 ಕ್ಷಿಪಣಿ ವ್ಯವಸ್ಥೆಗಾಗಿ ಭಾರತ ರಷ್ಯಾ ಜೊತೆ 540 ಕೋಟಿ ಡಾಲರ್ ಮೊತ್ತದ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಿದೆ.

-masthmagaa.com

Contact Us for Advertisement

Leave a Reply