ಮಹಾನಾಯಕನ ಷಡ್ಯಂತ್ರ, CD ನಕಲಿ, ಯುವತಿಗೆ ₹5 ಕೋಟಿ: ರಮೇಶ್ ಸ್ಫೋಟಕ ಹೇಳಿಕೆ

masthmagaa.com:

ತಮ್ಮ ಖಾಸಗಿ ವಿಡಿಯೋಗೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇವತ್ತು ಸುದ್ದಿಗೋಷ್ಠಿ ನಡೆಸಿ ಒಂದಷ್ಟು ಸ್ಪಷ್ಟನೆ ಕೊಡೋ ಪ್ರಯತ್ನ ಮಾಡಿದ್ದಾರೆ. ‘ನಾನು ಸಚಿವನಾದ ದಿನವೇ ಮಹಾನಾಯಕನೊಬ್ಬ ಚಾಲೆಂಜ್ ಹಾಕಿದ್ದ. ನೀನು 3 ತಿಂಗಳು ಮಾತ್ರ ಸಚಿವನಾಗಿ ಇರ್ತೀಯಾ ಅಂದಿದ್ದ. ಆದ್ರೆ ನಾನು ರಾಜ್ಯವೇ ಮೆಚ್ಚುವಂತಹ ಕೆಲಸ ಮಾಡಿದ್ದೇನೆ. ಹೀಗಾಗಿ ಆ ಮಹಾನಾಯಕ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾನೆ. ಬೆಂಗಳೂರಿನ 2 ಕಡೆ ಷಡ್ಯಂತ್ರ ನಡೆದಿದೆ. ಯಶವಂತಪುರ ಪೊಲೀಸ್ ಠಾಣೆಯ ಅಕ್ಕಪಕ್ಕದ ಅಪಾರ್ಟ್​ಮೆಂಟ್​​ನ 4ನೇ ಮಹಡಿ. ಒರಾಯನ್ ಮಾಲ್​ ಅಕ್ಕಪಕ್ಕದ ಅಪಾರ್ಟ್​ಮೆಂಟ್​​ನ 5ನೇ ಮಹಡಿಯಲ್ಲಿ ಈ ಷಡ್ಯಂತ್ರ ನಡೆದಿದೆ. ಆ ಸಿಡಿ ಹಂಡ್ರೆಡ್​ ಪರ್ಸೆಂಟ್ ಫೇಕ್, ಅದ್ರಲ್ಲಿ ಸತ್ಯಾಂಶವಿಲ್ಲ. ಸಿಡಿ ಬಿಡುಗಡೆಗೂ 26 ಗಂಟೆ ಮೊದಲೇ ಹೈಕಮಾಂಡ್​ ಮತ್ತು ಹಿತೈಷಿಗಳಿಂದ ನನಗೆ ಮಾಹಿತಿ ಬಂದಿತ್ತು. ಯುವತಿಗೆ ಕೊಟ್ಟಿದ್ದು 50 ಲಕ್ಷ ಅಲ್ಲ 5 ಕೋಟಿ ರೂಪಾಯಿ. ವಿದೇಶದಲ್ಲಿ 2 ಫ್ಲ್ಯಾಟ್​ಗಳನ್ನ ಕೊಟ್ಟಿರೋ ಬಗ್ಗೆಯೂ ಮಾಹಿತಿ ಇದೆ. ಈ ಸಂಬಂಧ ದೂರು ನೀಡೋಕೆ ಇದು ಹುಡುಗಾಟದ ವಿಚಾರವಲ್ಲ. ನನ್ನನ್ನ ರಾಜಕೀಯವಾಗಿ ಮುಗಿಸಲು ದೊಡ್ಡ ಷಡ್ಯಂತ್ರ ನಡೆದಿದೆ, ನೂರಾರು ಕೋಟಿ ಖರ್ಚು ಮಾಡಿದ್ದಾರೆ. ಆದ್ರೆ ಎಷ್ಟೇ ಖರ್ಚಾದ್ರೂ, ಪ್ರಭಾವಿಗಳಿದ್ರೂ ಅವರನ್ನ ಜೈಲಿಗೆ ಹಾಕದೇ ಬಿಡೋದಿಲ್ಲ. ನಾನು ಮತ್ತೆ ರಾಜಕೀಯಕ್ಕೆ ಬರುತ್ತೇನೋ ಇಲ್ವೋ ಗೊತ್ತಿಲ್ಲ. ನನಗೆ ರಾಜಕಾರಣದ ಮೇಲೆ ಆಸಕ್ತಿ ಇಲ್ಲ. ಇದರಲ್ಲಿ ಕುಮಾರಸ್ವಾಮಿ, ರೇವಣ್ಣ ಅವರ ಕೈವಾಡವಿಲ್ಲ. ಅವರು ನನ್ನ ಜೊತೆ ಫೋನ್​ನಲ್ಲಿ ಮಾತನಾಡಿದ್ದಾರೆ. ಮೈತ್ರಿ ಸರ್ಕಾರ ಬೀಳಿಸಿದ ಸಿಟ್ಟಿದ್ರೆ ಅವರು ಯಾಕೆ ನನ್ನ ಜೊತೆ ಮಾತನಾಡ್ತಿದ್ರು’ ಅಂತ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಇಲ್ಲಿ ಗಮನಿಸಬೇಕಾದ ವಿಚಾರ ಏನಂದ್ರೆ, ಒಂದ್ಕಡೆ ರಮೇಶ್ ಜಾರಕಿಹೊಳಿ ಆ ಸಿಡಿ ಹಂಡ್ರೆಡ್​ ಪರ್ಸೆಂಟ್​ ಫೇಕ್ ಅಂತಿದ್ದಾರೆ. ಮತ್ತೊಂದುಕಡೆ ಯುವತಿಗೆ 5 ಕೋಟಿ ದುಡ್ಡು ಕೊಟ್ಟಿದ್ದಾರೆ ಅಂತಿದ್ದಾರೆ. ಸಿಡಿ ಫೇಕ್ ಅಂದ್ಮೇಲೆ ಯುವತಿಗೆ ದುಡ್ಡು ಯಾಕೆ ಕೊಡ್ತಾರೆ ಅನ್ನೋ ಅನುಮಾನ ಏಳುತ್ತೆ. ಇದಕ್ಕೆ ರಮೇಶ್ ಜಾರಕಿಹೊಳಿ ಅಥವಾ ಆ ಯುವತಿಯೇ ಉತ್ತರ ಕೊಡ್ಬೇಕು. ಇನ್ನು ಮಹಾನಾಯಕನೊಬ್ಬ ಷಡ್ಯಂತ್ರ ಮಾಡಿದ್ದು ಅಂತಿದ್ದಾರೆ. ಆ ಮಹಾನಾಯಕ ಯಾರು ಅನ್ನೋದು ರಮೇಶ್ ಜಾರಕಿಹೊಳಿಗೆ ಗೊತ್ತು ಅಂತಾಯ್ತು. ಆದ್ರೆ ಅವರ ಹೆಸರನ್ನ ಬಹಿರಂಗಪಡಿಸಿಲ್ಲ. ಜೊತೆಗೆ CD ನಕಲಿ ಅಂತ ಹೇಳ್ತಿರೋ ರಮೇಶ್ ಜಾರಕಿಹೊಳಿ ದೂರು ಕೊಡಲ್ಲ ಅಂದಿದ್ದಾರೆ.

-masthmagaa.com

Contact Us for Advertisement

Leave a Reply