CD ಯುವತಿಯಿಂದ ಮತ್ತೊಂದು ವಿಡಿಯೋ.. ಸಿದ್ದರಾಮಯ್ಯ, ಡಿಕೆಶಿ ಹೆಸರು ಉಲ್ಲೇಖ

masthmagaa.com

ರಮೇಶ್ ಜಾರಕಿಹೊಳಿ ವಿಡಿಯೋದಲ್ಲಿರೋ ಯುವತಿ ಇವತ್ತು ಮತ್ತೊಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾಳೆ. ಅದರಲ್ಲಿ ತನ್ನ ತಂದೆ, ತಾಯಿಗೆ ರಕ್ಷಣೆ ಕೊಡಿ ಅಂತ ವಿಪಕ್ಷ ನಾಯಕರ ಬಳಿ ಕೇಳಿಕೊಂಡಿದ್ದಾಳೆ. ಜೊತೆಗೆ ಎಸ್​ಐಟಿ ತನಿಖೆ ಬಗ್ಗೆನೇ ಅನುಮಾನ ವ್ಯಕ್ತಪಡಿಸಿದ್ದಾಳೆ. ಆಕೆ ವಿಡಿಯೋದಲ್ಲಿ ಹೇಳಿರೋದೇನು ಅನ್ನೋದು ಇಲ್ಲಿದೆ ನೋಡಿ..

ನನಗೆ ನನ್ನ ತಂದೆ, ತಾಯಿಯ ಸುರಕ್ಷತೆಯೇ ಮುಖ್ಯ. ಅದರ ಬಗ್ಗೆ ಗ್ಯಾರಂಟಿ ಸಿಕ್ಕ ಬಳಿಕ ಎಸ್​ಐಟಿ ಮುಂದೆ ವಿಚಾರಣೆಗೆ ಬರುತ್ತೇನೆ. ಏನು ಹೇಳಿಕೆ ನೀಡಬೇಕೋ ಅದನ್ನ ನೀಡುತ್ತೇನೆ. ಅದಕ್ಕೂ ಮೊದಲು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ರಮೇಶ್​ ಕುಮಾರ್, ಮಹಿಳಾ ಸಂಘಟನೆಗಳಿಗೆ ನಾನು ಕೇಳಿಕೊಳ್ಳೋದು ಏನು ಅಂದ್ರೆ, ನನ್ನ ತಂದೆ, ತಾಯಿಗೆ ರಕ್ಷಣೆ ಕೊಡಿ.

ಎರಡು ದಿನದಿಂದ ನನಗೆ ನ್ಯಾಯ ಸಿಗುತ್ತೆ ಅನ್ನೋ ನಿರೀಕ್ಷೆ ಹುಟ್ಟಿದೆ. ಮಾರ್ಚ್ 12ನೇ ತಾರೀಖು ಬೆಂಗಳೂರು ಕಮಿಷನರ್ ಮತ್ತು ತನಿಖಾ ತಂಡಕ್ಕೆ ನನ್ನ ವಿಡಿಯೋ ಕಳಿಸಿಕೊಟ್ಟಿದ್ದೆ. ಆದ್ರೆ ಅದನ್ನ ಅವತ್ತು ರಿಲೀಸ್ ಮಾಡಲಿಲ್ಲ. ಮಾರ್ಚ್​ 13ನೇ ತಾರೀಖು ರಮೇಶ್ ಜಾರಕಿಹೊಳಿ ದೂರು ಕೊಡ್ತಾರೆ. ಅದಾಗಿ ಅರ್ಧಗಂಟೆಯಲ್ಲಿ ನನ್ನ ವಿಡಿಯೋ ರಿಲೀಸ್ ಮಾಡ್ತಾರೆ. ಇದನ್ನ ನೋಡಿದ್ರೆ ಎಸ್​ಐಟಿ ಯಾರ ಪರವಾಗಿದೆ? ಯಾರನ್ನ ಸೇಫ್ ಮಾಡ್ತಿದ್ದಾರೆ? ಅಂತ ಗೊತ್ತಾಗ್ತಿಲ್ಲ.

ನಾನು ಕಿಡ್ನಾಪ್ ಆಗಿದ್ದೇನೆ ಅಂತ ನನ್ನ ತಂದೆ, ತಾಯಿ ಸ್ವಇಚ್ಛೆಯಿಂದ ದೂರು ಕೊಡಲು ಸಾಧ್ಯವೇ ಇಲ್ಲ. ಯಾಕಂದ್ರೆ ನಾನು ತಪ್ಪು ಮಾಡಿಲ್ಲ ಅಂತ ತಂದೆ, ತಾಯಿಗೆ ಗೊತ್ತು ಅಂತ ವಿಡಿಯೋದಲ್ಲಿರುವ ಯುವತಿ ಹೇಳಿದ್ದಾಳೆ.

ಯುವತಿ ಹೇಳಿಕೆಯಲ್ಲಿ ಗಮನಿಸಬೇಕಾದ ಅಂಶಗಳು:

1. ಯುವತಿಗೆ ಎಸ್​ಐಟಿ ತನಿಖೆ ಬಗ್ಗೆ ನಂಬಿಕೆ ಇಲ್ಲ. ಅವರು ರಮೇಶ್ ಜಾರಕಿಹೊಳಿ ಪರವಾಗಿ ನಿಂತಿದ್ದಾರೆ ಅನ್ನೋ ರೀತಿ ಇದೆ ಯುವತಿ ಹೇಳಿಕೆ.

2. ತನ್ನ ತಂದೆ, ತಾಯಿಗೆ ರಕ್ಷಣೆ ಕೊಡಿ ಅಂತ ವಿಪಕ್ಷ ನಾಯಕರ ಬಳಿ ಕೇಳಿಕೊಂಡಿರೋದು ನೋಡಿದ್ರೆ ಸರ್ಕಾರ ಮತ್ತು ಪೊಲೀಸರ ಮೇಲೆ ಆಕೆಗೆ ನಂಬಿಕೆ ಇಲ್ಲ ಅನಿಸುತ್ತೆ.

3. ಎರಡು ದಿನದಿಂದ ನನಗೆ ನ್ಯಾಯ ಸಿಗಬಹುದು ಅನ್ನೋ ನಿರೀಕ್ಷೆ ಹುಟ್ಟಿದೆ ಅಂತ ಹೇಳೋದು ನೋಡಿದ್ರೆ ಕಳೆದ ಎರಡು ದಿನಗಳಿಂದ ವಿಪಕ್ಷ ನಾಯಕರು ವಿಧಾನಸಭೆ ಅಧಿವೇಶನದಲ್ಲಿ CD ವಿಚಾರವನ್ನ ಇಟ್ಟುಕೊಂಡು ದೊಡ್ಡಮಟ್ಟದಲ್ಲಿ ಹೋರಾಟ ಮಾಡ್ತಿರೋದು ಯುವತಿ ಮನಸಿನಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ ಅನಿಸುತ್ತೆ.

4. ಕಿಡ್ನಾಪ್ ಆಗಿದ್ದೇನೆ ಅಂತ ತಂದೆ, ತಾಯಿ ಸ್ವ ಇಚ್ಛೆಯಿಂದ ದೂರು ಕೊಡೋಕೆ ಸಾಧ್ಯವೇ ಇಲ್ಲ ಅಂತ ಹೇಳಿದ್ದು ನೋಡಿದ್ರೆ ಯಾರಾದ್ರೂ ಬಲವಂತ ಮಾಡಿ ದೂರು ಕೊಡಿಸಿದ್ದಾರಾ? ಹಾಗಿದ್ರೆ ಬಲವಂತ ಮಾಡಿದವರು ಯಾರು? ಅನ್ನೋ ಪ್ರಶ್ನೆ ಮೂಡುತ್ತೆ.

-masthmagaa.com

Contact Us for Advertisement

Leave a Reply