ಇನ್ನು ಕಡಿಮೆ ಬಡ್ಡಿಗೆ ಸಿಗುತ್ತೆ ಸಾಲ…ಯಾಕೆ ಗೊತ್ತಾ..?

ದೇಶದ ಅರ್ಥ ವ್ಯವಸ್ಥೆಯನ್ನು ಸುಧಾರಿಸಲು ರಿಜರ್ವ್ ಬ್ಯಾಂಕ್ ಮಹತ್ವದ ಹೆಜ್ಜೆ ಇಟ್ಟಿದೆ. RBI ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ 6 ಸದಸ್ಯರ ಸಮಿತಿ ರೆಪೋ ದರ ಇಳಿಸಲು ಮುಂದಾಗಿದೆ. ರೆಪೋ ದರವನ್ನು 0.25 ರಷ್ಟು ಇಳಿಸಿದ್ದು, 5.40ರಿಂದ 5.15 ಪರ್ಸೆಂಟ್‍ಗೆ ಇಳಿಕೆ ಮಾಡಿದೆ. ಈ ಮೂಲಕ ಈ ವರ್ಷದಲ್ಲಿ ಐದು ಬಾರಿ ರೆಪೋ ದರ ಇಳಿಸಿದಂತಾಗಿದೆ. ಜೊತೆಗೆ 5.15 ಶೇಕಡಕ್ಕೆ ರೆಪೋರೇಟ್ ಇಳಿಸಿರೋದು 9 ವರ್ಷಗಳಲ್ಲೇ ಇದೇ ಮೊದಲಾಗಿದೆ. ರೆಪೋ ದರ ಅಂದ್ರೆ ಬ್ಯಾಂಕ್‍ಗಳಿಗೆ ರಿಜರ್ವ್ ಬ್ಯಾಂಕ್ ಸಾಲ ನೀಡುವಾಗ ವಿಧಿಸುವ ಬಡ್ಡಿ. ಈ ದರ ಕಡಿಮೆಯಾದಾಗ ಬ್ಯಾಂಕ್‍ಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತೆ. ಆಗ ಬ್ಯಾಂಕ್‍ಗಳು ಕೂಡ ಸಾಲ ನೀಡುವಾಗ ಕಡಿಮೆ ಬಡ್ಡಿದರವನ್ನು ವಿಧಿಸಬೇಕಾಗುತ್ತೆ.

Contact Us for Advertisement

Leave a Reply