ಈ ಬ್ಯಾಂಕ್ ಗ್ರಾಹಕರು ಸಾವಿರಕ್ಕಿಂತ ಹೆಚ್ಚು ದುಡ್ಡು ತೆಗೆಯಂಗಿಲ್ಲ!

masthmagaa.com:

ಆರ್​ಬಿಐ ರಾಜ್ಯದ ಡೆಕ್ಕನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ವಹೀವಾಟಿನ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಇದ್ರಿಂದಾಗಿ ಬ್ಯಾಂಕ್ ಇನ್ಮುಂದೆ ಯಾವುದೇ ಸಾಲ ನೀಡುವಂತಿಲ್ಲ. ಜನರಿಂದ ದುಡ್ಡು ಜಮೆ ಮಾಡಿಕೊಳ್ಳುವಂತೆಯೂ ಇಲ್ಲ.. ಅದೇ ರೀತಿ ಜನ ಕೂಡ 6 ತಿಂಗಳಲ್ಲಿ 1 ಸಾವಿರ ರೂಪಾಯಿಗಿಂತ ಹೆಚ್ಚು ಹಣ ತೆಗೆಯುವಂತಿಲ್ಲ ಅಂತ ಆರ್​​ಬಿಐ ಹೇಳಿದೆ.

ಈ ಸಹಕಾರಿ ಬ್ಯಾಂಕ್​​ನ ಸದ್ಯದ ಪರಿಸ್ಥಿತಿ ಸರಿಯಾಗಿಲ್ಲವಾದ್ದರಿಂದ ಈ ನಿರ್ಬಂಧ ವಿಧಿಸಲಾಗಿದ್ದು, ಇದು 6 ತಿಂಗಳ ಕಾಲ ಮುಂದುವರಿಯಲಿದೆ. ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಿದ್ರೆ ಅದರ ಅರ್ಥ ಲೈಸೆನ್ಸೇ ರದ್ದಾಗುತ್ತೆ ಅಂತ ಅಲ್ಲ.. ನಿರ್ಬಂಧಗಳ ನಡುವೆಯೂ ಬ್ಯಾಂಕ್ ಸೇವೆ ಮುಂದುವರಿಸಬಹುದು. 6 ತಿಂಗಳಲ್ಲಿ ಬ್ಯಾಂಕ್ ಪರಿಸ್ಥಿತಿ ಸುಧಾರಿಸಬಹುದು. ನಂತರ ಮತ್ತೆ ಪರಿಶೀಲನೆ ನಡೆಸಲಾಗುತ್ತೆ ಅಂತ ಆರ್​​ಬಿಐ ತಿಳಿಸಿದೆ.

-masthmagaa.com

 

Contact Us for Advertisement

Leave a Reply