masthmagaa.com:

ದೇಶದಲ್ಲಿ ಕೊರೋನಾ ವೈರಾಣು ಹೊಸ ದಾಖಲೆ ಬರೆದಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 97,894 ಜನರಿಗೆ ಸೋಂಕು ದೃಢಪಟ್ಟಿದ್ದು 1,132 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 51.18 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 83,198 ಆಗಿದೆ.

ಕಳೆದ 24 ಗಂಟೆಗಳಲ್ಲಿ 82,000+ ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 40.25 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷ ದಾಟಿದ್ದು 10.09 ಲಕ್ಷ ಆಗಿದೆ. ಅಂದ್ರೆ ಇಷ್ಟು ಮಂದಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತ ಅರ್ಥ.

ಭಾರತದಲ್ಲಿ ಗುಣಮುಖ ಪ್ರಮಾಣ 78.64% ಇದ್ದು, ಸಾವಿನ ಪ್ರಮಾಣ 1.63%ಗೆ ಇಳಿಕೆಯಾಗಿದೆ. ಸೆಪ್ಟೆಂಬರ್ 16ರಂದು 11.36 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು 6.05 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ ಅಂತ ಐಸಿಎಂಆರ್ ತಿಳಿಸಿದೆ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 2.97+ ಲಕ್ಷ ಪ್ರಕರಣ (30,000+ ಸಾವು)

2. ಕರ್ನಾಟಕ: 1.01+ ಲಕ್ಷ ಪ್ರಕರಣ (7,500+ ಸಾವು)

3. ಆಂಧ್ರಪ್ರದೇಶ: 90,000+ ಪ್ರಕರಣ (5,100+ ಸಾವು)

4. ಉತ್ತರಪ್ರದೇಶ: 67,000+ ಪ್ರಕರಣ (4,600+ ಸಾವು)

5. ತಮಿಳುನಾಡು: 46,000+ ಪ್ರಕರಣ (8,500+ ಸಾವು)

6. ಚತ್ತೀಸ್​ಗಢ: 37,000+ ಪ್ರಕರಣ (611 ಸಾವು)

7. ಒಡಿಶಾ: 32,000+ ಪ್ರಕರಣ (656 ಸಾವು)

8.ಕೇರಳ: 32,000+ ಪ್ರಕರಣ (480 ಸಾವು)

9. ದೆಹಲಿ: 30,000+ ಪ್ರಕರಣ (4,800+ ಸಾವು)

10. ತೆಲಂಗಾಣ: 30,000+ ಪ್ರಕರಣ (1,005 ಸಾವು)

-masthmagaa.com

Contact Us for Advertisement

Leave a Reply