ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ರಾಕಿಂಗ್ ಸ್ಟಾರ್ ಯಶ್!

masthmagaa.com:

ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಈ ವರ್ಷದ ಆರಂಭದಲ್ಲಿ ಫೆಬ್ರವರಿ 14 ರಂದು ಮತ್ತೆ ಮರು ಮದುವೆ ಆಗಿದ್ದರು. ಮದುವೆಯಾಗಿ ಮೂರು ವರ್ಷಗಳ ನಂತರ ಮತ್ತೆ ಮರು ಮದುವೆಯಾಗಲು ನಿರ್ಧರಿಸಿದ ಈ ಜೋಡಿ ಕೋವಿಡ್‌ ಟೈಮ್‌ನಲ್ಲಿ ಸಿಂಪಲ್ಲಾಗಿ ಮದುವೆಯಾಗಿದ್ರು. ಈಗ, ಉದಯಪುರದಲ್ಲಿ ಫೆಬ್ರವರಿಯಲ್ಲಿ ಅದ್ದೂರಿಯಾಗಿ ಮದುವೆಯಾದ ಟೀಸರ್ ವಿಡಿಯೋವನ್ನು ರಿಲೀಸ್‌ ಮಾಡಿದ್ದಾರೆ.

ಇನ್ನು ಇವರ ಮದುವೆಗೆ ಹಲವಾರು ಸೆಲೆಬ್ರಿಟಿಗಳು ಹಾಜರಿದ್ದರು. ಆದರೆ ರಾಕಿಂಗ್‌ ಸ್ಟಾರ್‌ ಯಶ್‌ ಅವರು ಇವರ ಮದುವೆ ಸಂದರ್ಭದಲ್ಲಿ ಭಾಗವಹಿಸಿದ್ದು ಅಚ್ಚರಿ ಮೂಡಿಸಿದೆ. ಹಾರ್ದಿಕ್‌ ಪಾಂಡ್ಯಾ ಶೇರ್‌ ಮಾಡಿದ ವಿಡೀಯೋ ಕೊನೆಯಲ್ಲಿ ರಾಕಿ ಭಾಯ್‌ ಎಂಟ್ರಿ ಕೊಟ್ಟಿದ್ದಾರೆ. ಹಾರ್ದಿಕ್‌ ಪಾಂಡ್ಯ ಅವರೊಟ್ಟಿಗೆ ಡ್ಯಾನ್ಸ್‌ ಮಾಡಿದ್ದನ್ನ ಈ ವಿಡಿಯೋ ಕ್ಲಿಪ್‌ನಲ್ಲಿ ನೋಡಬಹುದು.

-masthmagaa.com

Contact Us for Advertisement

Leave a Reply