ಶ್ರೀಲಂಕಾದಲ್ಲೂ ರಾಕಿಂಗ್‌ ಸ್ಟಾರ್‌ ಯಶ್‌ ಹವಾ!

masthmagaa.com:

ನ್ಯಾಷನಲ್ ಸ್ಟಾರ್ ಯಶ್ ಅವರು ಕೆಜಿಎಫ್, ಕೆಜಿಎಫ್ 2 ಸಕ್ಸಸ್ ನಂತರ ತಮ್ಮ ಮುಂದಿನ ಸಿನಿಮಾದ ತಯಾರಿಯಲ್ಲಿ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಸದ್ಯಕ್ಕಂತು ರಾಕಿ ಭಾಯ್‌ ಎಲ್ಲೇ ಹೋದ್ರು ಅವರ ಮೇಲೆ ಎಲ್ಲರ ಕಣ್ಣಿರತ್ತೆ. ಯಶ್‌ ಅವರ ಫ್ಯಾನ್ಸ್‌ ಅಂತೂ ಅವರ ಮುಂದಿನ ಚಿತ್ರದ ಅನೌನ್ಸ್‌ಮೆಂಟ್‌ಗಾಗಿ ಕಾಯ್ತಾ ಕೂತಿದ್ದಾರೆ. ಇದೇ ಟೈಮಲ್ಲಿ ಯಶ್‌ ಫ್ಯಾನ್ಸ್‌ಗಳ ಕೈಲಿ ಸಿಕ್ಕಿಬಿದ್ದಿದ್ದಾರೆ. ವಿದೇಶದಲ್ಲಿ ಯಶ್ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳೋಕೆ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಇತ್ತೀಚಿಗಷ್ಟೇ ಯಶ್‌ ಶ್ರೀಲಂಕಾದ ಹೋಟೆಲ್‌ ಒಂದಕ್ಕೆ ಹೋಗಿದ್ದರು. ಅಲ್ಲಿ ಕೆಲಸ ಮಾಡುವ ಯಶ್‌ ಫ್ಯಾನ್‌ ಒಬ್ಬ ಅವರೊಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಂಡು ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾನೆ. ಜೊತೆಗೆ ಆ ಹೋಟೆಲ್‌ ಸಿಬ್ಬಂದಿ ಜೊತೆಗೆ ಯಶ್‌ ತೆಗೆಸಿಕೊಂಡಿರುವ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಾ ಇದೆ. ಈ ಫೋಟೊಗೆ ಅಭಿಮಾನಿಗಳು ಎಲ್ಲೆಲ್ಲೂ ರಾಕಿ ಭಾಯ್‌ ಹವಾ ಅಂತ ಸಾಲು ಸಾಲು ಕಾಮೆಂಟ್‌ಗಳನ್ನ ಮಾಡ್ತಾ ಇದಾರೆ. ಇನ್ನು ಯಶ್‌ ಅವರು ಶ್ರೀಲಂಕಾದ ದಕ್ಷಿಣ ಭಾಗದಲ್ಲಿರುವ ಯಾಲಾ ನ್ಯಾಷನಲ್‌ ಪಾರ್ಕ್‌ಗೆ ಭೇಟಿಕೊಟ್ಟಿರುವ ಮಾಹಿತಿ ಇದೆ.

-masthmagaa.com

Contact Us for Advertisement

Leave a Reply