ಇನ್ಮುಂದೆ ಎಲ್ಲರೂ ʻಇಂಡಿಯಾʼ ಬದಲಿಗೆ ʻಭಾರತʼ ಬಳಸಿ: RSS ಮುಖ್ಯಸ್ಥ

masthmagaa.com:

ದೇಶದ ಜನರು ಇನ್ಮುಂದೆ ರಾಷ್ಟ್ರವನ್ನ ಉಲ್ಲೇಖಿಸುವಾಗ ʻಇಂಡಿಯಾʼ ಅಂತ ಕರೆಯೋದನ್ನ ನಿಲ್ಲಿಸಿ ʻಭಾರತʼ ಎಂದು ಕರೆಯಬೇಕು ಅಂತ RSS ಮುಖ್ಯಸ್ಥ ಮೋಹನ್‌ ಭಾಗವತ್‌ ಒತ್ತಾಯಿಸಿದ್ದಾರೆ. ‘ಭಾರತ’ಅನ್ನೊ ಹೆಸರು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇದನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತಿದೆ. ನಮ್ಮ ದೇಶದ ಹೆಸರು ಭಾರತ ಅಂತ ಹಿಂದಿನಿಂದಲೂ ಇದೆ. ಭಾಷೆ ಯಾವುದೇ ಆಗಿರಲಿ, ಹೆಸರು ಒಂದೇ ಆಗಿರುತ್ತದೆ ಅಂತ. ಹೀಗಾಗಿ ಭಾಷೆಗಳ ವ್ಯತ್ಯಾಸವನ್ನ ಲೆಕ್ಕಿಸದೆ ಜನರು ಇನ್ಮುಂದೆ ಭಾರತ ಅಂತ ಕರೆಯೋಕೆ ಶುರು ಮಾಡಬೇಕು. ಅದೇ ರೀತಿ ಎಲ್ಲಾ ಕ್ಷೇತ್ರಗಳಲ್ಲೂ ಇಂಡಿಯಾ ಹೆಸರನ್ನ ಬದಲಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋದು ಮುಖ್ಯವಾಗಿದೆ ಅಂತ ಭಾಗವತ್ ಹೇಳಿದ್ದಾರೆ. ಇತ್ತ ಭಾರತ ಹಿಂದೂರಾಷ್ಟ್ರ ಅಂತ ನಿನ್ನೆ ಭಾಗವತ್‌ ಅವ್ರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಸ್ವಾಮಿ ಪ್ರಸಾದ್ ಮೌರ್ಯ, ಭಾರತ ಎಂದಿಗೂ ಹಿಂದು ರಾಷ್ಟ್ರವಲ್ಲ ಅಂತ ಹೇಳಿದ್ದಾರೆ. ನಮ್ಮ ಸಂವಿಧಾನ ಜಾತ್ಯತೀತ ರಾಜ್ಯದ ಕಲ್ಪನೆಯನ್ನು ಆಧರಿಸಿದೆ. ಭಾರತದಲ್ಲಿರುವ ಎಲ್ಲಾ ಜನರು ಭಾರತೀಯರು. ನಮ್ಮ ಭಾರತೀಯ ಸಂವಿಧಾನ ಎಲ್ಲಾ ಧರ್ಮಗಳು, ನಂಬಿಕೆಗಳು, ಪಂಗಡಗಳು ಮತ್ತು ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply