ಯುದ್ಧದಿಂದ ಹಿಂದೆ ಸರಿಯುತ್ತಾ ಪುಟಿನ್ ಪಡೆ!?

masthmagaa.com:

ಯುಕ್ರೇನ್‌ ಯುದ್ಧದಲ್ಲಿ ರಷ್ಯಾ ಹಿನ್ನಡೆ ಕಾಣ್ತಾ ಇದೆ ಅನ್ನೋದು ಈಗ ಸೀಕ್ರೇಟ್‌ ಆಗಿ ಉಳಿದಿಲ್ಲ. ತಾನು ಅಂದುಕೊಂಡ ಟಾರ್ಗೆಟ್‌ಗಳನ್ನ ಇದುವರೆಗು ರೀಚ್‌ ಆಗೋಕೆ ಆಗಿಲ್ಲ. ಈಗ ಈ ವೈಫಲ್ಯವನ್ನ ಮುಚ್ಚಿ ಹಾಕೋಕೆ ಪುಟಿನ್‌ ಪಡೆ ತನ್ನ ಗೋಲ್‌ ಪೋಸ್ಟ್‌ ಅನ್ನೇ ಚೇಂಜ್‌ ಮಾಡ್ತಿದೆ. ರಷ್ಯಾ ಸೇನೆಯ ಹಿರಿಯ ಅಧಿಕಾರಿ ಸೆರ್ಗೆಯಿ ರುಡ್‌ಸ್ಕೋಯಿ, ನಮ್ಮ ಗುರಿ ಇದ್ದಿದ್ದು ಡಾನ್‌ಬಾಸ್‌ ಪ್ರದೇಶಗಳನ್ನ ಲಿಬರೇಟ್‌ ಅಂದ್ರೆ ಸ್ವತಂತ್ರಗೊಳಿಸೋದು ಮಾತ್ರ ಆಗಿತ್ತು ಅಂತ ಹೇಳಿದ್ದಾರೆ. ಆದ್ರೆ ಡಾನ್‌ಬಾಸ್‌ ವಶಪಡಿಸಿಕೊಳ್ಳೋದಷ್ಟೆ ರಷ್ಯಾದ ಗುರಿ ಆಗಿದ್ರೆ ಇಷ್ಟು ದೊಡ್ಡ ಮಟ್ಟದಲ್ಲಿ ಯುದ್ಧ ಮಾಡಿ ಇಷ್ಟೊಂದು ನಷ್ಟ ಅನುಭವಿಸೋ ಅಗತ್ಯತೆ ಏನಿತ್ತು ಅಂತ ಎಲ್ಲರ ಪ್ರಶ್ನೆಯಾಗಿದೆ. ಈ ಸಂಬಂಧ ಅಮೇರಿಕಕದ ಮಾಜಿ ಕಮಾಂಡರ್‌ ಬೆನ್‌ ಹಾಡ್ಜಸ್‌ ಮಾತಾಡಿ, ಆಬ್ವಿಯಸ್ಲಿ ಅವ್ರು ತಾವು ಹಾಕಿಕೊಂಡ ಗುರಿ ಸಾಧಿಸೋಕೆ ಸಂಪೂರ್ಣ ವಿಫಲ ಆಗಿದ್ದಾರೆ. ಅದಕ್ಕೆ ಅವ್ರು ಈಗ ಆಗಿರೋದ್ನೆ ಜಯ ಅಂತ ಘೋಷಣೆ ಮಾಡ್ಕೋಳ್ಳೋಕೆ ಪ್ರಯತ್ನ ಪಡ್ತಿದ್ದಾರೆ ಅಂತ ಹೇಳಿದ್ದಾರೆ. ಇನ್ನು ಆ ಕಡೆ ಡಾನ್‌ಬಾಸ್‌ ಮೇಲು ರಷ್ಯಾ ಸಂಪೂರ್ಣ ಹಿಡಿತ ಸಾಧಿಸಿಲ್ಲ ಅಂತ ಪರಿಣಿತರು ಹೇಳ್ತಾ ಇದ್ದಾರೆ. ಲುಹಾನ್‌ಸ್ಕಲ್ಲೇನೋ ರಷ್ಯಾ ಸೇನೆ 93% ಪ್ರದೇಶವನ್ನ ಕಂಟ್ರೋಲ್‌ಗೆ ತಗೊಂಡಿದೆ ಆದ್ರೆ ಡೊನೆಟ್‌ಸ್ಕ್‌ನಲ್ಲಿ ಕೇವಲ 54% ಪ್ರದೇಶ ರಷ್ಯಾ ಸೇನೆ ಹಿಡಿತದಲ್ಲಿ ಇದೆ ಅಂತ ಹೇಳಲಾಗ್ತಿದೆ. ಈ ಸಮಯದಲ್ಲಿ ಪಾಶ್ಚೀಮಾತ್ಯ ದೇಶಗಳು ರಷ್ಯಾ ಕೆಮಿಕಲ್‌ ವೆಪನ್‌ ಬಳಸುತ್ತೆ ಬಯಲಾಜಿಕಲ್‌ ಬಳಸುತ್ತೆ ಅಂತ ಹೆದರೋದು ಬಿಟ್ಟು ಯುಕ್ರೇನ್‌ಗೆ ಹೆಚ್ಚಿನ ಆಯುಧ ಪೂರೈಕೆ ಮಾಡ್ಬೇಕು ಅಂತ ಬೆನ್‌ ಹಾಡ್ಜಸ್‌ ಹೇಳಿದ್ದಾರೆ. ನಾವು ಇದುವರ್ಗು ಯುಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನ ಪಾರ್ಸೆಲ್‌ ತರ ಕಳಿಸ್ತಿದೀವಿ, ಪ್ರವಾಹದ ರೀತಿ ಕಳಸ್ಬೇಕು. ಇಲ್ಲಾಂದ್ರೆ ನಾವು ಯುಕ್ರೇನ್‌ ಸೋಲಬಾರ್ದು ಅಂತ ಅಷ್ಟೇ ನೋಡಿದ್‌ ಹಾಗೆ ಆಗುತ್ತೆ ಅವ್ರು ಗೆಲ್ಲಬೇಕು ಅಂತ ಬಯಸಿದ ರೀತಿ ಆಗಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply