ಪ್ರತಿದಾಳಿ ತೀವ್ರಗೊಳಿಸಿದ ಯುಕ್ರೇನ್!‌ ರಷ್ಯಾ ಪಡೆಗೆ ಮತ್ತೆ ಒತ್ತಡದ ಪರಿಸ್ಥಿತಿ!

masthmagaa.com:

ಇಷ್ಟು ದಿನ ರಷ್ಯಾ ಒತ್ತಡದಲ್ಲಿದೆ, ಹಾಗಾಗಿ ಹತಾಷೆಯಿಂದ ಮನಬಂದಂತೆ ದಾಳಿ ಮಾಡ್ತಿದೆ ಅಂತ ಪತ್ರಿಕೆಗಳು ವರದಿ ಮಾಡ್ತಿದ್ವು. ಆದ್ರೆ ಇದೀಗ ಮತ್ತೆ ರಷ್ಯಾ ಪಡೆ ಒತ್ತಡ ಅನುಭವಿಸ್ತಿದೆ. ಇದನ್ನ ಖುದ್ದು ಪುಟಿನ್‌ನಿಂದ ನೇಮಕ ಆಗಿ ಆರಂಭದಲ್ಲಿ ರೌದ್ರಾವತಾರ ತೋರಿ, ಇವ್ರಿಂದ ಯುದ್ಧದ ಸ್ವರೂಪವೇ ಬದಲಾಯ್ತು ಅಂತ ಹೇಳಲಾಗಿದ್ದ ರಷ್ಯಾ ಪಡೆ ಜನರಲ್ ಸೆರ್ಗಿ ಸುರೊವಿಕಿನ್‌ ಒಪ್ಕೊಂಡಿದ್ದಾರೆ. ಯುಕ್ರೇನ್‌ನಲ್ಲಿ ಪರಿಸ್ಥಿತಿ ತುಂಬಾ ಕಾವೇರಿದೆ. ನಾವು ಒತ್ತಡದಲ್ಲಿದ್ದೇವೆ ಅಂತ ಹೇಳಿದ್ದಾರೆ. ನಾವು ಇತ್ತೀಚೆಗೆ ಸೇರಿಸ್ಕೊಂಡಿರೋ ನಾಲ್ಕು ಪ್ರದೇಶಗಳನ್ನ ವಾಪಸ್‌ ಪಡೆಯೋಕೆ ಯುಕ್ರೇನ್‌ ತೀವ್ರವಾಗಿ ಪ್ರತಿದಾಳಿ ಮಾಡ್ತಿದೆ. ಇದ್ರಿಂದ ರಷ್ಯಾ ಪಡೆ ಒತ್ತಡದಲ್ಲಿದೆ. ಖೆರ್ಸಾನ್‌ ಪ್ರದೇಶದಲ್ಲಿ ಪರಿಸ್ಥಿತಿ ಕಠಿಣವಾಗಿದೆ. ಶತ್ರು ಉದ್ದೇಶಪೂರ್ವಕವಾಗಿ ಮೂಲಸೌಕರ್ಯಗಳ ಮೇಲೆ ಹಾಗೂ ನಿವಾಸಿ ಕಟ್ಟಡಗಳ ಮೇಲೆ ದಾಳಿ ಮಾಡ್ತಿದೆ ಅಂತ ಹೇಳಿದ್ದಾರೆ. ಇದಕ್ಕೆ ಸಾಕ್ಷಿಯಂತೆ ಕಳೆದ ಕೆಲ ವಾರಗಳಲ್ಲಿ ರಷ್ಯಾ ಪಡೆ ಖೆರ್ಸಾನ್‌ ಪ್ರದೇಶದಲ್ಲಿ 20 ರಿಂದ 30 ಕಿಲೋ ಮೀಟರ್‌ ಹಿಂದೆ ಸರಿದಿವೆ ಅಂತ ತಿಳಿದು ಬಂದಿದೆ. ಇನ್ನು ರಷ್ಯಾ ವಶಪಡಿಸಿಕೊಂಡಿರೊ 4 ಪ್ರದೇಶಗಳಲ್ಲಿ ಯುಕ್ರೇನ್‌ ದಾಳಿಗಳಿಂದ ಜನರನ್ನ ರಕ್ಷಿಸೋಕೆ, ಅವ್ರನ್ನ ರಷ್ಯಾಕ್ಕೆ ಸ್ಥಳಾಂತರ ಮಾಡಲಾಗುತ್ತೆ ಅಂತ ಅನೌನ್ಸ್‌ ಮಾಡಲಾಗಿದೆ. ಇತ್ತ ರಷ್ಯಾ ಯುಕ್ರೇನ್‌ನ ಮೂಲಸೌಕರ್ಯಗಳನ್ನ ಗುರಿಯಾಗಿಸಿ ದಾಳಿ ಮಾಡ್ತಿದೆ. ಇದ್ರಿಂದ ಸುಮಾರು 1,100 ಪಟ್ಟಣಗಳು ಪವರ್‌ ಕಟ್‌ ಸಮಸ್ಯೆಯನ್ನ ಎದುರಿಸ್ತಿವೆ. ಕೇವಲ ಕಳೆದ 10 ದಿನಗಳಲ್ಲಿ ರಷ್ಯಾ ಸುಮಾರು 190 ಸಾಮೂಹಿಕ ಕ್ಷಿಪಣಿ ದಾಳಿಗಳನ್ನ ಮಾಡಿದೆ. ಇನ್ನೊಂದ್‌ ಕಡೆ ಈಗಾಗಲೇ ರಷ್ಯಾ, ಇರಾನ್‌ ಡ್ರೋನ್‌ಗಳನ್ನ ಬಳಸಿ ದಾಳಿ ಮಾಡ್ತಿದೆ ಅಂತ ಯಕ್ರೇನ್‌ ಸೇರಿದಂತೆ ಹಲವು ರಾಷ್ಟ್ರಗಳು ಆರೋಪ ಮಾಡ್ತಿವೆ. ಈ ಹೊತ್ತಲ್ಲೇ ಇರಾನ್‌, ರಷ್ಯಾಕ್ಕೆ ಹೆಚ್ಚಿನ ಕ್ಷಿಪಣಿಗಳು, ಡ್ರೋನ್‌ಗಳನ್ನ ಪೂರೈಕೆ ಮಾಡೋಕೆ ಒಪ್ಪಿದೆ.

-masthmagaa.com

Contact Us for Advertisement

Leave a Reply