ಆರ್ಯನ್ ಖಾನ್​ ಕೇಸ್​ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್​! ತನಿಖಾಧಿಕಾರಿಯೇ ಟಾರ್ಗೆಟ್?

masthmagaa.com:

ಮುಂಬೈ ಟು ಗೋವಾ ಹಡಗಲ್ಲಿ ಶಾರೂಖ್ ಖಾನ್​​​​​ ಪುತ್ರ ಆರ್ಯನ್ ಖಾನ್​ ಮಾದಕ ಪಾರ್ಟಿ ಪ್ರಕರಣದಲ್ಲಿ ರೋಚಕ ಬೆಳವಣಿಗೆಗಳು ನಡೆದಿವೆ. ಪ್ರಕರಣದಲ್ಲಿ ಪ್ರಮುಖ ತನಿಖಾಧಿಕಾರಿಯಾಗಿರೋ ಸಮೀರ್ ವಾಂಖೆಡೆ 8 ಕೋಟಿ ರೂಪಾಯಿ ದುಡ್ಡು ಪಡೆದಿದ್ದಾರೆ ಅಂತ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರೋ ಕೆಪಿ ಗೋಸವಿಯವರ ಬಾಡಿಗಾರ್ಡ್​ ಪ್ರಭಾಕರ್ ಸೈಲ್​​ ಆರೋಪಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸ್ತಿರೋ ವಿಶೇಷ ಕೋರ್ಟ್​​​​​ಗೆ ಸಲ್ಲಿಸಿರೋ ಅಫಿಡವಿಟ್​ನಲ್ಲಿ ಅಕ್ಟೋಬರ್ 3ರಂದು ಲೋವರ್ ಪಾರೆಲ್​​ನಲ್ಲಿ ಗೋಸವಿ ಮತ್ತು ಶಾರೂಖ್ ಖಾನ್ ಮ್ಯಾನೇಜರ್ ಪೂಜಾ ಡಲ್ಡಾನಿ ನಡುವೆ ಮೀಟಿಂಗ್ ನಡೆದಿತ್ತು ಅಂತ ಉಲ್ಲೇಖಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರೋ ಎನ್​ಸಿಬಿ ಅಧಿಕಾರಿಗಳು ಮತ್ತು ಇತರೆ ವ್ಯಕ್ತಿಗಳು ನನ್ನ ಹತ್ಯೆ ಮಾಡ್ಬೋದು ಅಥವಾ ಅಪರಹಣ ಮಾಡ್ಬೋದು ಅಂತ ಆತಂಕ ವ್ಯಕ್ತಪಡಿಸಿದ್ರು. ಇದಕ್ಕೆ ಇವತ್ತು ಎನ್​ಸಿಬಿ ಕೂಡ ಅಫಿಡವಿಟ್ ಸಲ್ಲಿಸಿದೆ. ಸಮೀರ್ ವಾಂಖೆಡೆ ನಿಷ್ಕಳಂಕ, ಪ್ರಾಮಾಣಿಕ ಅಧಿಕಾರಿಗಳಲ್ಲಿ ಒಬ್ಬರು ಅಂತ ಹೇಳಿದೆ. ಇನ್ನು ಇವತ್ತು ಬೆಳಗ್ಗೆ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆಯ ಜನನ ಪ್ರಮಾಣ ಪತ್ರ ಶೇರ್ ಮಾಡಿ, ಸಮೀರ್ ದಾವೂದ್ ವಾಂಖೇಡೆಯ ಫೋರ್ಜರಿ ಇಲ್ಲಿಂದಲೇ ಶುರುವಾಯ್ತು ಅಂತ ಬರೆದುಕೊಂಡಿದ್ರು. ಅದಕ್ಕೆ ಸಂಬಂಧಿಸಿದಂತೆ ಸಮೀರ್ ವಾಂಖೆಡೆ ಕೂಡ ಕೋರ್ಟ್​​ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಇದ್ರಲ್ಲಿ ನನ್ನನ್ನು, ನನ್ನ ತಂಗಿಯನ್ನು ಸೇರಿದಂತೆ ನನ್ನ ಇಡೀ ಕುಟುಂಬದವರನ್ನು ಟಾರ್ಗೆಟ್ ಮಾಡಲಾಗ್ತಿದೆ. ನನ್ನನ್ನು, ನನ್ನ ಕುಟುಂಬ, ತಂದೆ, ತಾಯಿಯ ಹೆಸರು ಹಾಳು ಮಾಡೋಕೆ ಯತ್ನಿಸಲಾಗುತ್ತಿದೆ. ನನ್ನ ತಂದೆ ಹಿಂದೂ, ತಾಯಿ ಮುಸ್ಲಿಂ.. ನಮ್ಮದು ಬಹುಧರ್ಮೀಯ ಕುಟುಂಬ. ನನ್ನ ಜೀವನದ ಖಾಸಗಿ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕೋ ಮೂಲಕ ನನ್ನ ತೇಜೋವಧೆ ಮಾಡಲಾಗ್ತಿದೆ ಅಂದ ಸಮೀರ್ ವಾಂಖೆಡೆ ಹೇಳಿದ್ದಾರೆ. ಜೊತೆಗೆ ಈ ವ್ಯಕ್ತಿ ಅಂದ್ರೆ ನವಾಬ್ ಮಲ್ಲಿಕ್ ಯಾಕೆ ಸಾವನ್ನಪ್ಪಿರೋ ನನ್ನ ತಾಯಿಯನ್ನು ಈ ಪ್ರಕರಣದಲ್ಲಿ ಎಳೆದು ತರ್ತಿದ್ದಾರೆ ಅಂತ ಪ್ರಶ್ನಿಸಿದ್ದಾರೆ.

ಇನ್ನು ಸಮೀರ್ ವಾಂಖೆಡೆ ವಿರುದ್ಧ ದುಡ್ಡು ಪಡೆದ ಆರೋಪ ಕೇಳಿ ಬಂದಿರೋದ್ರಿಂದ ಎನ್​ಸಿಬಿ ಮೂರು ಅಧಿಕಾರಿಗಳ ತಂಡವನ್ನು ರಚಿಸಿದೆ. ಈ ತಂಡ ದೆಹಲಿಯಿಂದ ಮುಂಬೈಗೆ ಹೋಗಿ ತನಿಖೆ ನಡೆಸಲಿದೆ.

ಇನ್ನು ಇದೇ ಪ್ರಕರಣ ಸಂಬಂಧ ಶಿವಸೇನೆ ನಾಯಕ ಸಂಜಯ್ ರಾವತ್ ವೇಯ್ಟ್​ & ವಾಚ್ ಅಂತ ಟ್ವೀಟ್ ಮಾಡಿದ್ದಾರೆ.

ಇದೇ ಪ್ರಕರಣ ಸಂಬಂಧ ಇವತ್ತು ಬಾಲಿವುಡ್ ನಟಿ ಅನನ್ಯ ಪಾಂಡೆಗೆ ವಿಚಾರಣೆಗೆ ಹಾಜರಾಗುವಂತೆ ಎನ್​ಸಿಬಿ ನೋಟಿಸ್ ನೀಡಿತ್ತು. ಆದ್ರೆ ಅನನ್ಯ ಪಾಂಡೆ ಇವತ್ತಿನ ವಿಚಾರಣೆಗೆ ಗೈರಾಗಿದ್ದಾರೆ. ಗುರುವಾರ ಇವರ ಮನೆ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ರು. ನಂತರ ಶುಕ್ರವಾರವೂ ವಿಚಾರಣೆ ನಡೆಸಿ, ಸೋಮವಾರ ವಿಚಾರಣೆಗೆ ಹಾಜರಾಗುಂತೆ ಸೂಚಿಸಿದ್ರು. ವೃತ್ತಿಪರ ಕಮಿಟ್​​ಮೆಂಟ್ ಕಾರಣ ನೀಡಿರೋ ನಟಿ, ವಿಚಾರಣೆಗೆ ಹಾಜರಾಗಲು ಸ್ವಲ್ಪ ಟೈಂ ಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply