ಸದ್ಗುರು ಪೇಂಟಿಂಗ್ 4 ಕೋಟಿಗೆ ಸೇಲ್ .. ಬಂದ ಹಣ ಸದುದ್ದೇಶಕ್ಕೆ..!

masthmagaa.com:

ಇಶಾ ಫೌಂಡೇಶನ್​ನ ಸ್ಥಾಪಕ ಸದ್ಗುರು ಅವರು ಪೇಂಟ್ ಮಾಡಿದ 5×5 ಅಡಿಯ ಚಿತ್ರಕಲೆಯೊಂದು ಬರೋಬ್ಬರಿ 4.14 ಕೋಟಿ ರೂಪಾಯಿಗೆ ಹರಾಜಾಗಿದೆ. ಈ ಹಣವನ್ನು ತಮಿಳುನಾಡಿನ ಗ್ರಾಮೀಣ ಭಾಗದಲ್ಲಿ ಕೊರೋನಾ ವಿರುದ್ಧ ಹೋರಾಟಕ್ಕೆ ಬಳಸಲು ನಿರ್ಧರಿಸಲಾಗಿದೆ.

ಕೊರೋನಾ ವಿರುದ್ಧ ಹೋರಾಟದ ‘ಬೀಟ್​ ದಿ ವೈರಸ್​’ ನಿಧಿಗೆ ಯಾರು ಹೆಚ್ಚು ಹಣವನ್ನು ದಾನ ಮಾಡುತ್ತಾರೋ ಅವರಿಗೆ ಈ ಪೇಂಟಿಂಗ್ ಸಿಗುತ್ತದೆ ಅಂತ ಇತ್ತೀಚೆಗಷ್ಟೇ ಸದ್ಗುರು ಘೋಷಿಸಿದ್ದರು. ಅದರಂತೆ ಆ ಪೇಂಟಿಂಗ್ ಈಗ 4.14 ಕೋಟಿ ರೂಪಾಯಿಗೆ ಹರಾಜಾಗಿದೆ.

ಅಂದ್ಹಾಗೆ 2 ಲಕ್ಷಕ್ಕೂ ಹೆಚ್ಚು ಜನರಿರುವ ತಮಿಳುನಾಡಿನ ತೋಂಡಮುತೂರ್ ಬ್ಲಾಕ್​ನ ಹಳ್ಳಿಗಳಿಗೆ ಸೋಂಕು ಬರದಂತೆ ತಡೆಯುವುದು ಇಶಾ ಫೌಂಡೇಶನ್​ನ ‘ಬೀಟ್​ ದಿ ವೈರಸ್’ ಅಭಿಯಾನದ ಗುರಿ. ಈಗಾಗಲೇ 700ಕ್ಕೂ ಹೆಚ್ಚು ಸ್ವಯಂಸೇವಕರ ಕಾರ್ಯಪಡೆ ಈ ಸಂಬಂಧ ಕೆಲಸ ಮಾಡುತ್ತಿದೆ. ಅಲ್ಲದೆ ಪೂಲುವಪಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್‌ಸಿ) ಸ್ಟ್ಯಾಂಡ್‌ಬೈ ಐಸೊಲೇಷನ್ ವಾರ್ಡ್ ಅನ್ನು ಕೂಡ ಸ್ಥಾಪಿಸಲಾಗಿದೆ.

masthmagaa.com

Contact Us for Advertisement

Leave a Reply